ಶ್ರೀಮಂಗಲ, ಜ. 1: ಟಿ ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ ಶೆಟ್ಟಿಗೇರಿ ಗ್ರಾಮದ ಡೋಬಿ ಕಾಲೋನಿಗೆ 2017-18ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯ ಶೇ. 20ರ ಮೀಸಲು ಅನುದಾನದಲ್ಲಿ ಕಿರು ನೀರು ಸರಬರಾಜು ಯೋಜನೆಯಡಿ ಹೊಸ ಬೋರ್ ವೆಲ್‍ಗೆ ಮೋಟಾರ್ ಅಳವಡಿಸಿ 2 ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಚ್ಚಾಮಾಡ ಎನ್. ಸುಮಂತ್ ನೆರವೇರಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕೆ.ಎಸ್. ಯಶೋಧ, ಪಂಚಾಯಿತಿ ಸದಸ್ಯರುಗಳಾದ ಚಟ್ಟಂಗಡ ರಂಜು ಕರುಂಬಯ್ಯ, ಚೊಟ್ಟೆಯಾಂಡಮಾಡ ಉದಯ, ಮುಕ್ಕಾಟೀರ ಸಂದೀಪ್, ಪೆಮ್ಮಂಡ ಸಬಿತ, ಉಳುವಂಗಡ ದಮಯಂತಿ, ತಡಿಯಂಗಡ ಮೀನಾ, ಬಾಚಿರ ಝಾನ್ಸಿ, ಮುಂತಾದವರು ಹಾಜರಿದ್ದರು.