ಸಿದ್ದಾಪುರ, ಜ. 1: ಕೊಡುಂಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘದ 4ನೇ ಕೊಡಗು ಜಿಲ್ಲಾ ಸಮಾವೇಶ ತಾ. 3 ರಂದು ಸಿದ್ದಾಪುರ ಸೆಂಟನರಿ ಹಾಲ್‍ನಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿ.ಎನ್.ಕಿಶನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9.30 ಗಂಟೆಗೆ ನೆಲ್ಯಹುದಿಕೇರಿ ಸಮೀಪದ ಕಾವೇರಿ ಹೊಳೆಯಿಂದ ತಾಲಪೊಲಿ ಮತ್ತು ಚೆಂಡೆಮೇಳಗಳೊಂದಿಗೆ ಶೋಭಾಯಾತ್ರೆಯು ಹೊರಡಲಿದ್ದು ನೆಲ್ಯಹುದಿಕೇರಿ ಮುತ್ತಪ್ಪ ದೇವಾಲಯದ ಅಧ್ಯಕ್ಷ ಚೀಯಣ್ಣ ಹಾಗೂ ಸಂಘದ ಕೇರಳದ ಕಾರ್ಯದರ್ಶಿ ಶಿಬು ಸ್ವಾಮಿ ಶೋಭಾಯಾತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದರು. ಸಿದ್ದಾಪುರ ಸೆಂಟನರಿ ಹಾಲ್ ನಲ್ಲಿ ಬೆಳಿಗ್ಗೆ 10.30ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಲಿದ್ದು ಮುಖ್ಯ ಭಾಷಣಗಾರರಾಗಿ ಕೇರಳದ ಸಿ.ಬಿ ಶೈಬು ಹಾಗೂ ಶ್ರೀ ವಿಶ್ವಮಿತ್ರ ಗುರೂಜಿ ಹರಿದ್ವಾರ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ ಮತ್ತಿತರರು ಭಾಗವಹಿಸುವರು.

ಗೋಷ್ಠಿಯಲ್ಲಿ ವೆಳ್ಳಚ್ಚಾಪಡ್ ಸಂಘದ ಮುಖ್ಯಸ್ಥರಾದ ಸಂದೀಪ್ ಕುಮಾರ್, ಪಿ.ಆರ್ ಪ್ರಕಾಶ್, ಬಿಂದು ಲಕ್ಷ್ಮಣ್ ಇದ್ದರು.