ಶನಿವಾರಸಂತೆ, ಜ. 1: ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ವಿಜಯಪುರ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಕೊಡ್ಲಿಪೇಟೆ ಹೋಬಳಿಯ ದಸಂಸ, ಕರವೇ ಹಾಗೂ ಟಿಪ್ಪು ಅಭಿಮಾನಿಗಳ ಸಂಘದ ವತಿಯಿಂದ ಕೊಡ್ಲಿಪೇಟೆ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ದಲಿತ ಮುಖಂಡ ನಿರ್ವಾಣಪ್ಪ, ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಔರಂಗ್ ಜೇಬ್, ಬಿಎಸ್‍ಪಿಯ ಮೋಹನ್ ಮೌರ್ಯ ಹಾಗೂ ದಲಿತ ಒಕ್ಕೂಟಗಳ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಮಾತನಾಡಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಮಹಮ್ಮದ್ ಹನೀಫ್, ವಕೀಲ ದೌಲತ್ ಅಬ್ಬಾಸ್ ಹಾಜಿ, ದಲಿತ ಮುಖಂಡರಾದ ಜನಾರ್ಧನ್, ವೇದ್ ಕುಮಾರ್, ವಸಂತ್, ಜಗದೀಶ್, ವೀರಭದ್ರ, ಪ್ರಸನ್ನ, ಸೋಮಣ್ಣ, ಸುಹೀಲ್, ಧರ್ಮ, ಅಭಿ, ಹೊನ್ನಮ್ಮ, ಹೂವಯ್ಯ, ನಿಸಾರ್, ಮೋಹನ್ ದಾಸ್, ಉಸ್ಮಾನ್ ಹಾಜಿ, ಗ್ರಾ.ಪಂ. ಉಪಾಧ್ಯಕ್ಷ ವಿಜಯ್, ಕ್ಯಾತೆ ವಸಂತ್ ಮತ್ತಿತರರು ಹಾಜರಿದ್ದರು.