ರಾಜ್ಯದಲ್ಲಿ ಸುದ್ದಿಯಾದ 4 ಮಾನಿನಿಯರು 2017 ಹಲವರ ಪಾಲಿಗೆ ಸಿಹಿಯಾದರೆ, ಮತ್ತಷ್ಟು ಜನರ ಪಾಲಿಗೆ ಕಹಿ. ಆದರೆ ಕರ್ನಾಟಕದಲ್ಲಿ ಮಾತ್ರ 2017 ರಲ್ಲಿ ಮಹಿಳಾ ಪರ್ವ ಆರಂಭವಾಗಿತ್ತು. ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಹೆಡ್ ರಮ್ಯಾ ಕನ್ನಡ ನಟಿಯಾಗಿ ಚಿರಪರಿಚಿತರಾದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ, ಈ ವರ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆಯಾಗುವ ಮೂಲಕ ಹೆಚ್ಚು ಸುದ್ದಿಯಾಗಿದ್ದರು. ಮೊದಲ ಮಹಿಳಾ ಡಿಜಿಪಿ ನೀಲಮಣಿ ರಾಜು ಕರ್ನಾಟಕ ರಾಜ್ಯದಲ್ಲಿ ಡಿಜಿಪಿ ಪದವಿಗೇರಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಖ್ಯಕಾರ್ಯದರ್ಶಿಯಾಗಿ ರತ್ನಪ್ರಭಾಹಿರಿಯ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ ಅವರನ್ನು ನವೆಂಬರ್ ತಿಂಗಳಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿತು.ವಿಶ್ವಕಪ್‍ನಲ್ಲಿ ವೇದಾ ಕೃಷ್ಣಮೂರ್ತಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವರಾದ ವೇದಾ ಕೃಷ್ಣಮೂರ್ತಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ. ಈ ವರ್ಷ ಇವರು ಹೆಚ್ಚು ಸುದ್ದಿಯಲ್ಲಿದ್ದಿದ್ದು, ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ವಿಶ್ವಕಪ್‍ನಲ್ಲಿ ಫೈನಲ್ ಹಂತದವರೆಗೂ ಕೊಂಡೊಯ್ದವ ರಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣಕ್ಕೆ. ಡೈರಿಯ ವಿವರ ಬಹಿರಂಗ
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ, ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಅವರ ಡೈರಿ ಪ್ರಕರಣ ದೇಶಾದ್ಯಂತ ಸದ್ದು ಮಾಡಿತು. ಗೋವಿಂದರಾಜು ಮನೆಯಲ್ಲಿ ಐಟಿ ದಾಳಿ ನಡೆದಾಗ ಸಿಕ್ಕ ಡೈರಿಯಲ್ಲಿನ ಮಾಹಿತಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಡೈರಿಯಲ್ಲಿ ಹಲವರಿಗೆ ಹಣ ಕೊಟ್ಟ ಬಗ್ಗೆ ಮಾಹಿತಿ ಇತ್ತು ಎಂಬುದು ಚರ್ಚೆಗೆ ಗ್ರಾಸವಾಯಿತು.ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ
ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ನಿವಾಸದ ಮುಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆಯಿತು. ಹತ್ಯೆ ನಡೆದು ನಾಲ್ಕು ತಿಂಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಈ ಹತ್ಯೆ ದೇಶದ ತುಂಬಾ ಸುದ್ದಿ ಮಾಡಿತು.ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಕೊನೆಗೂ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ವೇದಿಕೆ ಯೊಂದನ್ನು ಸಿದ್ದಪಡಿ ಸಿದೆ. ಲಿಂಗಾಯತ ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆಗೆ 7 ಜನರ ತಜ್ಞರ ಸಮಿತಿಯನ್ನು ರಚಿಸಿದೆ.ಪರಪ್ಪನ ಅಗ್ರಹಾರಕ್ಕೆ ವಿ.ಕೆ.ಶಶಿಕಲಾ
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ವಿ. ಕೆ. ಶಶಿಕಲಾ ಅಪರಾಧಿ ಎಂಬ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಆದ್ದರಿಂದ, ಫೆಬ್ರವರಿಯಲ್ಲಿ ವಿ. ಕೆ. ಶಶಿಕಲಾ, ಇ.ಇಳವರಸಿ ಮತ್ತು ಸುಧಾಕರನ್ ಪರಪ್ಪನ ಅಗ್ರಹಾರ ಜೈಲು ಸೇರಿದರು. ಎಲ್ಲಾ ಅಪರಾಧಿಗಳಿಗೆ 4 ವರ್ಷ ಜೈಲು ಶಿಕ್ಷೆ, 10 ಕೋಟಿ ರೂ. ದಂಡ ವಿಧಿಸಲಾಗಿದೆ.ಮಹದಾಯಿ ಹೋರಾಟ: ಉತ್ತರ ಕರ್ನಾಟಕ ಸ್ತಬ್ಧ
ಮಹದಾಯಿ ಪ್ರತಿಭಟನೆ : ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಬಂದ್ : ಮಹದಾಯಿ ನೀರನ್ನು ಉತ್ತರ ಕರ್ನಾಟಕಕ್ಕೆ ಹರಿಸಲು ಕೇಂದ್ರ, ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿ ಉತ್ತರ ಕರ್ನಾಟಕದಲ್ಲಿ ಬಂದ್ ನಡೆಯಿತು.
ನೀರು ಬಿಡುವದಿಲ್ಲ : ಮಹದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡೆವು’ ಹೀಗೆಂದು ಗೋವಾದ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯಂಕರ್ ಗುಡುಗಿದ್ದಾರೆ.
2017 ಮುಗಿದೇ ಹೋಯಿತು. ಮತ್ತೆ ಹೊಸ ವರ್ಷಬಂದಿದೆ, ಹೊಸ ಕನಸುಗಳನ್ನು ಹುಟ್ಟು ಹಾಕಿದೆ. ಹೊಸ ನಿರೀಕ್ಷೆಗಳ ಭರವಸೆ ಮೂಡಿಸಿದೆ.2018 ನ್ನು ನಾವು ಸ್ವಾಗತಿಸೋಣ. ಕರ್ನಾಟಕದಲ್ಲಿ ಈ ವರ್ಷ ನಡೆದ ಪ್ರಮುಖ ಘಟನೆಗಳ ಚಿತ್ರಣವನ್ನು ಒಮ್ಮೆ ಅವಲೋಕಿಸೋಣ.
2017ರ ಜನವರಿ 1ರಂದು ರಾಜ್ಯ, ದೇಶ ಮಟ್ಟದಲ್ಲಿ ಸುದ್ದಿ ಮಾಡಿದ ನಗರ . ಹೊಸ ವರ್ಷಾಚರಣೆ ವೇಳೆ ನಗರದ ಬ್ರಿಗೇಡ್‍ರಸ್ತೆಯಲ್ಲಿ ಯುವತಿಗೆ ಕಿರುಕುಳ ನೀಡಿದ್ದು ದೊಡ್ಡ ಸುದ್ದಿಯಾಯಿತು. ಭಾರೀ ಚರ್ಚೆ ನಡೆಯಿತು.
ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಡೈರಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ವರಿಷ್ಠರಿಗೆ ಕಪ್ಪ ಕಾಣಿಕೆ ಹಗರಣ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಗುಜರಾತ್ ರಾಜ್ಯಸಭೆ ಚುನಾವಣೆ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ, ಬೆಂಗಳೂರು ಸ್ಟೀಲ್ ಬ್ರಿಡ್ಜ್ ವಿವಾದಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು.
ರಾಜಕೀಯವಾಗಿಯೂ ಈ ವರ್ಷದಲ್ಲಿ ಹಲವು ಏಳು-ಬೀಳು ಕಂಡಿತು. ಮಾಜಿ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಬಿಜೆಪಿ ಸೇರಿದರು. ರಾಜ್ಯದ ಹಲವು ನಾಯಕರು ಪಕ್ಷಾಂತರ ಮಾಡಿದರು. ರಾಜ್ಯದ ಪಾಲಿಗೆ ವರ್ಷಾಂತ್ಯದಲ್ಲಿ 2018 ರ ಮಹಾ ಚುನಾವಣಾ ತಯಾರಿಗೆ ಪದಾರ್ಪಣೆಯಿಕ್ಕಿದ ವರ್ಷವೆನಿಸಿದೆ.
ಪ್ರಮುಖ ರಾಜಕೀಯ ಬೆಳವಣಿಗೆಗಳು
ರಾಜ್ಯದಲ್ಲಿ ಹಲವಾರು ರಾಜಕೀಯ ಬದಲಾವಣೆಗಳು ಆಗುತ್ತಿವೆ. ಚುನಾವಣೆ ಎದುರಾಗುತ್ತಿರುವದೇ ಇದಕ್ಕೆ ಪ್ರಮುಖ ಕಾರಣ. ಈ ವರ್ಷ ಕರ್ನಾಟಕ ಹಲವಾರು ರಾಜಕೀಯ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹಲವು ನಾಯಕರು ಪಕ್ಷ ಬದಲಾವಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಹೊಸ ಸಚಿವರ ಆಗಮನವಾಗಿದೆ. ಕೆಲವು ನಾಯಕರು ಅಕಾಲಿಕವಾಗಿ ಮರಣ ಹೊಂದಿದ್ದಾರೆ. ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 2018ರ ವಿಧಾನಸಭೆ ಚುನಾವಣೆಗೆ ಪಕ್ಷಗಳು ತಯಾರಿ ಆರಂಭಿಸಿವೆ.
ಟಾಪ್‍ಕಾಪ್‍ಗಳಲ್ಲಿ ರೂಪಾ
ರಾಷ್ಟ್ರೀಯ ಮಾಧ್ಯಮವೊಂದು ದೇಶದ ಅತ್ಯುತ್ತಮ ಹತ್ತು ಐಪಿಎಸ್ ಅಧಿಕಾರಿಗಳ ಪಟ್ಟಿಯೊಂದನ್ನು ಮಾಡಿದ್ದು, ಆ ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಅವರ ಹೆಸರು ಕೂಡ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ದೂರು ನೀಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ರೂಪಾ.
ಚುನಾವಣೆಗೆ ಮೂರು ಪಕ್ಷಗಳ ತಯಾರಿ
2018 ಕರ್ನಾಟಕದ ಪಾಲಿಗೆ ಚುನಾವಣಾ ವರ್ಷ. ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ, ಕಾಂಗ್ರೆಸ್ ನವ ಕರ್ನಾಟಕ ನಿರ್ಮಾಣ, ಮನೆ-ಮನೆಗೆ ಕಾಂಗ್ರೆಸ್, ಜೆಡಿಎಸ್ ಕುಮಾರಪರ್ವ ಹೆಸರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದವು.
ಗುಜರಾತ್ ರಾಜ್ಯಸಭೆಗೆ ಇಲ್ಲಿ ಚರ್ಚೆ
ಗುಜರಾತ್‍ನ ಕಾಂಗ್ರೆಸ್ ಶಾಸಕರು ಬೆಂಗಳೂರು ಹೊರವಲಯದ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದು, ಭಾರೀ ಚರ್ಚೆಗೆ ಕಾರಣವಾಯಿತು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶಾಸಕರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಅವರ ಮನೆ ಮೇಲೆ ಐಟಿ ದಾಳಿ ನಡೆಯಿತು. ಕೊನೆಗೆ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಜಯಗಳಿಸಿದರು.ಡಿ.ಕೆ. ಎಸ್. ಮನೆ ಮೇಲೆ ಐಟಿ ದಾಳಿ
ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಯಿತು. ರಾಜ್ಯದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ರಾಜ್ಯ ಸರ್ಕಾರವು ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಹಲವು ಆರೋಪ ಮಾಡಿತು.
ವಿಶಾಲ್ ಸಿಕ್ಕ ರಾಜೀನಾಮೆ
ದೇಶದ ಪ್ರತಿಷ್ಠಿತ ಐಟಿ ಸೇವಾ ಕಂಪನಿ ಬೆಂಗಳೂರು ಮೂಲದ ಇನ್ಫೋಸಿಸ್‍ನಲ್ಲಿ ಭಾರೀ ಬದಲಾವಣೆ ನಡೆಯಿತು. ಕಂಪೆನಿಯ ಸಿಇಓ ಹುದ್ದೆಗೆ ವಿಶಾಲ್ ಸಿಕ್ಕ ರಾಜೀನಾಮೆ ನೀಡಿದರು.
ನೋವು- ನಲಿವು
* ಮಾಜಿ ಸಿಎಂ ಧರಂಸಿಂಗ್, ಸಚಿವ ಎಚ್.ಎಸ್.ಮಹದೇವ ಪ್ರಸಾದ್, ಮಾಜಿ ಸಚಿವ ಖಮರುಲ್ಲಾ ಇಸ್ಲಾಂ ನಿಧನ ರಾಜಕೀಯ ಕ್ಷೇತ್ರದ ನೋವಿನ ಸುದ್ದಿಗಳು.
ಗೆಲವು-ಅಧಿಕಾರ
* ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಯಿತು. * ಗೀತಾ ಮಹದೇವ ಪ್ರಸಾದ್, ಎಚ್.ಎಂ.ರೇವಣ್ಣ, ಆರ್.ಬಿ.ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರಿದರು. ಸಚಿವರಾಗಿ ಗೀತಾ, ರೇವಣ್ಣ, ತಿಮ್ಮಾಪುರ ಪ್ರಮಾಣ ವಚನ ಸ್ವೀಕಾರವಾಯಿತು.ಇಂದಿರಾ ಕ್ಯಾಂಟಿನ್
ರಾಜ್ಯ ಸರಕಾರ ರಾಜ್ಯದ ಅನೇಕ ಕಡೆ ಕಡಿಮೆ ದರದ ಆಹಾರ ಒದಗಿಸುವ ಇಂದಿರಾ ಕ್ಯಾಂಟಿನ್‍ನನ್ನು ತರೆದಿದೆ.
ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ
2017 ಸೋನಿಯಾ ಪುತ್ರ ರಾಹುಲ್ ಗಾಂಧಿಗೆÉ ರಾಷ್ಟ್ರೀಯ ಕಾಂಗ್ರೆಸ್
ಅಧ್ಯಕ್ಷ ಪಟ್ಟ ದೊರಕಿಸಿಕೊಟ್ಟ ವರ್ಷವಾಗಿದೆ.ಹೊಸವರ್ಷದ ಸಂಭ್ರಮಾಚರಣೆಯನ್ನು ಸುಟ್ಟು ಭಸ್ಮ ಮಾಡುವಂಥ ಘಟನೆ ಮುಂಬೈನ ಲೋವರ್ ಪಾರೆಲ್ ಪ್ರದೇಶ ದಲ್ಲಿರುವ ಕಮಲಾ ಮಿಲ್ಸ್ ಕಾಂಪೌಂಡ್ ನಲ್ಲಿರುವ ಹೋಟೆಲಿನಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಸತ್ತವರ ಸಂಖ್ಯೆ 15ಕ್ಕೇರಿದೆ.
ಸಶಸ್ತ್ರ ಪಡೆಯಲ್ಲಿ ಸಿಬ್ಬಂದಿ ಕೊರತೆ ಭಾರತದ ಸಶಸ್ತ್ರ ಪಡೆಗಳು ಸುಮಾರು 60 ಸಾವಿರದಷ್ಟು ಸಿಬ್ಬಂದಿ ಕೊರತೆ ಎದುರಿಸುತ್ತಿರುವದಾಗಿ ಸರಕಾರ ಪ್ರಕಟಿಸಿದೆ.
ತ್ರಿವಳಿ ತಲಾಕ್ ಮಸೂದೆ ಅಂಗೀಕಾರ ‘ಮುಸ್ಲಿಂ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯು ಡಿ.28ರಂದು ಲೋಕಸಭೆಯಲ್ಲಿ ಮಂಡನೆಯಾಗಿ ಬಹುಮತದಿಂದ ಅಂಗೀಕಾರಗೊಂಡಿದೆ.ಸಿದ್ಧಗಂಗಾ ಶ್ರೀಗೆ ಬೇಸರ
ಶತಾಯುಷಿ ಸಿದ್ಧಗಂಗಾ ಶ್ರೀಗಳನ್ನು ಶ್ರೀಶೈಲದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಡಿ. 29 ರಂದು ಭೇಟಿ ಮಾಡಿ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ಚರ್ಚಿಸಿದರು. ಬಳಿಕ ಪ್ರತಿಕ್ರಿಯಿಸಿದ ಶ್ರೀಶೈಲ ಜಗದ್ಗುರುಗಳು, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ಧಗಂಗಾ ಶ್ರೀಗಳು ನೋವಿನಲ್ಲಿದ್ದಾರೆ. ಸಿದ್ಧಗಂಗಾ ಶ್ರೀಗಳಿಗೆ ಇತ್ತೀಚಿನ ವಿದ್ಯಮಾನಗಳು ಬೇಸರ ತರಿಸಿವೆ ಎಂದರು.ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆ ಗೆಲುವಿನ ನಂತರ ಮೋದಿ- ಅಮಿತ್ ಶಾ ಜೋಡಿ. ತಾರಾ ವಿವಾಹ
ಇಟಲಿ ದೇಶದ ಮಿಲಾನ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ-ಬಾಲಿವುಡ್ ತಾರೆ ಅನುಷ್ಕಾ ಶರ್ಮಾ.ಟ್ರಂಪ್ ಮಗಳು ಇವಾಂಕಾ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗಳು ಇವಾಂಕಾ ಟ್ರಂಪ್ ಹೈದರಾಬಾದ್‍ಗೆ
ಭೇಟಿ ನೀಡಿದ್ದ ವೇಳೆ. ವಿಶ್ವಸುಂದರಿ
ವಿಶ್ವಸುಂದರಿ ಮಿಸ್ ವಲ್ರ್ಡ್ 2017 ಆಗಿ ಆಯ್ಕೆಯಾದ ಭಾರತ ಹರ್ಯಾಣದ ಮಾನುಷಿ ಛಿಲ್ಲರ್ .ಹನಿಪ್ರೀತ್‍ಳನ್ನು ಕೋರ್ಟ್‍ಗೆ ಕರೆತಂದಾಗ..
ವಿವಾದಿತ ದೇವ ಮಾನವ ರಾಮ್ ರಹೀಮ್ ಸಿಂಗ್‍ನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಹಾಗೂ ಆಕೆಯ ಸಹವರ್ತಿ ಜಗ್ ದೀಪ್ ಕೌರ್ ರನ್ನು ಪಂಚ್ ಕುಲಾದ ಕೋರ್ಟ್‍ಗೆ ಪೊಲೀಸರು ಕರೆತಂದ ಕ್ಷಣ. ಈ ಮೊದಲು ಗುರುಮೀತ್ ರಾಮ್ ರಹೀಂ ಸಿಂಗ್ ತನ್ನ ಆಶ್ರಮ ದೇರಾ ಸಚ್ಚಾ ಸೌಧದಲ್ಲಿ ನಡೆಸುತ್ತಿದ್ದ ಲೈಂಗಿಕ ಹಗರಣ, ಅಕ್ರಮ ಆಸ್ತಿಗಳಿಕೆ ಆರೋಪಗಳಿಗಾಗಿ ಜೈಲು ಪಾಲಾಗಿದ್ದು ಸತ್ಯಕ್ಕೆ ಜಯ ಸಂದ ವರ್ಷ 2017 ತೃತೀಯ ಲಿಂಗಿಗಳಿಗೆ ಆಶಾದಾಯಕ : 2017 ತೃತೀಯ ಲಿಂಗಿಗಳಿಗೆ ಆಶಾದಾಯಕ ವರ್ಷವಾಗಿದ್ದು, ಮಂಗಳ ಮುಖಿಯರನ್ನೂ ಕೂಡ ಅಧಿಕೃತವಾಗಿ ತೃತೀಯ ಲಿಂಗಿಗಳೆಂದು ಸ್ವೀಕರಿಸಿದ ವರ್ಷವಾಗಿದೆ.
ರಾಮಸೇತು : ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ. ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿದ್ದು ಇದರೊಂದಿಗೆ ರಾಮಸೇತುವಿನ ಅಸ್ತಿತ್ವದ ಕುರಿತ ಪ್ರಶ್ನೆಗೊಂದು ಸಿಹಿ ಉತ್ತರ ಸಿಕ್ಕಿದೆ.
ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚನೆ : ನಾವು ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ಟೀಕೆ, ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ.
ಸದ್ದು ಮಾಡಿದ ಪ್ರಮುಖ ವಿವಾದಗಳು
ನಾಡ ಧ್ವಜ ವಿವಾದ : ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜ ಅಗತ್ಯ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 9 ಮಂದಿಯ ಸಮಿತಿ ರಚನೆ ಮಾಡಿದ್ದು ಇದು ವ್ಯಾಪಕ ಚರ್ಚೆಗೆ ನಾಂದಿಯಾಗಿತ್ತು. ಅಂತೂ ಧ್ವಜ ವಿವಾದ ಬಗೆಹರಿದಿಲ್ಲ.
ಕೆಪಿಎಂಇ ಕಾಯ್ದೆ ತಿದ್ದುಪಡಿ ವಿವಾದ : ಖಾಸಗಿ ಆಸ್ಪತ್ರೆಗಳು ಬಡರೋಗಿಗಳನ್ನು ಸುಲಿಗೆ ಮಾಡುತ್ತಿದೆ ಎನ್ನುವ ಕಾರಣ ನೀಡಿ ಅವುಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ತಿದ್ದುಪಡಿ) ಮಸೂದೆ– 2017 (ಕೆಪಿಎಂಇ) ಜಾರಿಗೆ ತರಲು ಮುಂದಾದಾಗ ವಿವಾದವಾಗಿತ್ತು.
ವಕೀಲರ ಕಾಯ್ದೆ ತಿದ್ದುಪಡಿ ವಿವಾದ : ವಕೀಲರ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಿದ್ದ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದರು. ಉದ್ದೇಶಿತ ತಿದ್ದುಪಡಿಯಲ್ಲಿ ವಕೀಲರ ಪರಿಷತ್‍ಗೆ ವಕೀಲರಲ್ಲದವರನ್ನೂ ನೇಮಕ ಮಾಡಬೇಕು ಎನ್ನುವ ಅಂಶವಿದ್ದು ಇದಕ್ಕೆ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತ್ಯೇಕ ಲಿಂಗಾಯಿತ ಧರ್ಮ ವಿವಾದ : ಉತ್ತರ ಕರ್ನಾಟಕದಲ್ಲಿ ಪ್ರಬಲ ಸಾಮುದಾಯಿಕ ಶಕ್ತಿಯಾಗಿರುವ ಲಿಂಗಾಯಿತ, ವೀರಶೈವರದು ಪ್ರತ್ಯೇಕ ಧರ್ಮ. ಅವರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎನ್ನುವ ಮೂಲಕ ಲಿಂಗಾಯಿತರಿಗೆ ಪ್ರತ್ಯೇಕ ಧರ್ಮದ ಸ್ಥಾನ ಮಾನ ಕಲ್ಪಿಸಿಕೊಡಬೇಕು ಎನ್ನುವ ಕೂಗು ಎದ್ದಿದೆ..
ಟಿಪ್ಪು ಜಯಂತಿ ವಿವಾದ : ಟಿಪ್ಪು ಒಬ್ಬ ಸ್ವಾತಂತ್ರ ಹೋರಾಟಗಾರ. ಅವನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕಳೆದೆರಡು ವರ್ಷಗಳಿಂದ ವಿವಾದಕ್ಕೆ ಆಸ್ಪದ ನೀಡಿತ್ತು. ಈ ವರ್ಷ ಸಹ ನವೆಂಬರ್ ಹತ್ತರಂದು ಕರ್ನಾಟಕ ಸರ್ಕಾರ ಟಿಪ್ಪು ಜಯಂತಿಯ ಆಚರಣೆಯಲ್ಲಿ ತೊಡಗಿತು.
ಮಹದಾಯಿ ವಿವಾದ : ನೀರು ಹಂಚಿಕೆ ವಿಚಾರದಲ್ಲಿ ಇತ್ತ ಕಾವೇರಿ ಹಾಗೂ ಅತ್ತ ಮಹದಾಯಿ ಎರಡೂ ಕಡೆಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎನ್ನುವದು ಕನ್ನಡಿಗರ ಕೂಗು. ಉತ್ತರ ಕರ್ನಾಟಕ ಅದರಲ್ಲಿಯೂ ಹುಬ್ಬಳ್ಳಿ ಧಾರವಾಡ ಸೀಮೆಯ ಕುಡಿಯುವ ನೀರಿನ ಮೂಲವಾದ ಮಹದಾಯಿ ಯೋಜನೆಗೆ ಗೋವಾ ತಕರಾರು ತೆಗೆಯುತ್ತಿದ್ದು ಈ ವರ್ಷವೂ ವಿವಾದ, ಹೋರಾಟಗಳು ತಾರಕಕ್ಕೇರಿದ್ದವು.
ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) : ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ದೇಶದಲ್ಲಿ ಜಾರಿಗೊಂಡ ಬಳಿಕ ಅನೇಕ ಕಡೆ ಪ್ರತಿರೋಧ ವ್ಯಕ್ತಗೊಂಡಿತ್ತು. ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿ ಮಾಡಿದ ಬಳಿಕ, ಜುಲೈಯಿಂದ ಅಕ್ಟೋಬರ್ ವರೆಗೆ ರಾಜ್ಯಗಳಿಗೆ ಆದ ಆದಾಯ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 24,500 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಪರಿಹಾರ ನೀಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಕಳೆದ ನವೆಂಬರ್ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡಿದ 24,500 ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರದಲ್ಲಿ ಕರ್ನಾಟಕ 3,271 ಕೋಟಿ ರೂಪಾಯಿ ಪಡೆದಿದೆ.
ಪದ್ಮಾವತಿ ವಿವಾದ : ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದೆ. ಸದ್ಯಕ್ಕೆ ಚಿತ್ರ ಪ್ರದರ್ಶನಕ್ಕೆ ‘ಪದ್ಮಾವತ್’ ಎನ್ನುವ ಹೆಸರು ಬದಲಾವಣೆಗೆ ಮತ್ತು ಕೆಲವೊಂದು ನಿರ್ಬಂಧಗಳೊಂದಿಗೆ ಹಸಿರು ನಿಶಾನೆ ದೊರಕಿದೆ.
ಡೊಕ್ಲಾಂ ವಿವಾದ : ಭಾರತ ಹಾಗೂ ಭೂತಾನ್ ಗಡಿಯಲ್ಲಿನ ಡೋಕ್ಲಾಂ ಪ್ರದೇಶ ತನ್ನದೆಂದು ಸಾರಲು ಚೀನಾ ತನ್ನ ಸೇನಾ ತುಕಡಿಗಳನ್ನು ನೇಮಿಸುವ ಮೂಲಕ ಈ ವರ್ಷ ಹೊಸ ಗಡಿ ವಿವಾದವೊಂದನ್ನು ಹುಟ್ಟು ಹಾಕಿತ್ತು. ಒಟ್ಟು ಎಪ್ಪತ್ತೆರಡು ದಿನಗಳ ಕಾಲ ಮುಂದುವರಿದ ಈ ಗಡಿ ವಿವಾದವನ್ನು ಭಾರತ ಸರ್ಕಾರ ಯಶಸ್ವಿಯಾಗಿ ಶಮನಗೊಳಿಸಿತ್ತು.
2016 ರ ನವೆಂಬರ್ ನಲ್ಲಿ ಅಪನಗದೀಕರಣ ಘೋಷಣೆಯಾದರೂ 2017 ರ ಪ್ರಾರಂಭದ ತಿಂಗಳುಗಳಲ್ಲಿ ಅದರ ಬಿಸಿ ದೇಶಾದ್ಯಂತ ಹರಡಿ ಗಂಭೀರ ಸುದ್ದಿಯಾಗಿತ್ತು. : 2017 ಹಿನ್ನೋಟದಲ್ಲಿ : 7 ವಿಧಾನಸಭೆ ಚುನಾವಣೆಗಳಲ್ಲಿ 6ರಲ್ಲಿ ಬಿಜೆಪಿ ಜಯಗಳಿಸಿದೆ. ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್, ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗೆ ಈ ವರ್ಷ ಚುನಾವಣೆ ನಡೆಯಿತು. ಇದರಲ್ಲಿ ಪಂಜಾಬ್‍ನಲ್ಲಿ ಎನ್.ಡಿ.ಎ ಕೈಯಿಂದ ಕಾಂಗ್ರೆಸ್ ಅಧಿಕಾರ ಕಸಿದುಕೊಂಡರೆ, ಉಳಿದೆಲ್ಲ ಕಡೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಿತು.
ಭಾರತಕ್ಕೆ ನೂತನ ರಾಷ್ಟ್ರÀಪತಿ : ಭಾರತದ ನೂತನ ರಾಷ್ಟ್ರÀಪತಿಯಾಗಿ ರಾಮನಾಥ್ ಕೋವಿಂದ್ ಹಾಗೂ ಉಪರಾಷ್ಟ್ರಪತಿಯಾಗಿ ವೆಂಕಯ್ಯನಾಯ್ಡು ಆಯ್ಕೆಗೊಂಡ ವರ್ಷವಿದು.
ಅಮೇರಿಕ ಅಧ್ಯಕ್ಷರ ಆಯ್ಕೆ : ಅಮೇರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾದರು.
ಭಾರೀ ಸಾವು-ನೋವು : ಲಾಸ್ ವೇಗಾಸ್ ಸಂಗೀತ ಮೇಳ ಸಂದರ್ಭ ಉಗ್ರಗಾಮಿ ಗುಂಡಿನ ಧಾಳಿಗೆÉ 58 ಮಂದಿ ಬಲಿಯಾದರು. ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 44 ಮಂದಿ ಅಸು ನೀಗಿದರು.
2017ನೇ ಸಾಲಿನ ನೊಬೆಲ್ ಪ್ರಶಸ್ತಿ : 2017ನೇ ಸಾಲಿನ ನೊಬೆಲ್ ಪ್ರಶಸ್ತಿ ಪಡೆದವರೆಂದರೆ ನೊಬೆಲ್ ಶಾಂತಿ ಪ್ರಶಸ್ತಿ: ಅಂತಾರಾಷ್ಟ್ರೀಯ ಅಣ್ವಸ್ತ್ರ ವಿರೋಧಿ ಆಂದೋಲನ (ಐಸಿಎಎನ್)ಕ್ಕೆ ನೊಬೆಲ್‍ಶಾಂತಿ ಪ್ರಶಸ್ತಿ ಸಂದಿದೆ.
ಅರ್ಥಶಾಸ್ತ್ರ: ಯೂನಿವರ್ಸಿಟಿ ಆಫ್ ಚಿಕಾಗೋದ ರಿಚರ್ಡ್ ಥಲೇರ್ ಅವರನ್ನು ಆಯ್ಕೆ ಮಾಡಲಾಗಿದೆ. ಅಂಡಸ್ರ್ಟಾಂಡಿಂಗ್ ದಿ ಸೈಕಾಲಜಿ ಆಫ್ ಎಕೆನಾಮಿಕ್ಸ್ ಗಾಗಿ ರಿಚರ್ಡ್ ಥಲೇರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ . ಭೌತಶಾಸ್ತ್ರ ಪ್ರಶಸ್ತಿ: ’ಗುರುತ್ವ ತರಂಗ’ಗಳ ಅನ್ವೇಷಣೆಗೆÀ ನೊಬೆಲ್ ಪ್ರಶಸ್ತಿ ಅಮೆರಿಕಾದ ಭೌತ ವಿಜ್ಞಾನಿಗಳಾದ ರೈನರ್ ವೆಯಿಸ್, ಬ್ಯಾರಿ ಬ್ಯಾರಿಶ್ ಮತ್ತು ಕಿಪ್ ಥಾರ್ನೆ ಅವರಿಗೆ ಸಂದಿದೆ. ರಸಾಯನ ಶಾಸ್ತ್ರ ನೊಬೆಲ್: ಸ್ವಿರ್ಜಲ್ಯಾಂಡ್‍ನ ಸಂಶೋಧಕ ಜಾಕ್ವೆಸ್ ಡುಬೋಶೆಟ್, ಅಮೆರಿಕಾದ ಜೋಕಿಮ್ ಫ್ರಾಂಕ್ ಮತ್ತು ಬ್ರಿಟನ್‍ನ ರಿಚರ್ಡ್ ಹೆಂಡರ್ಸನ್ ಅವರಿಗೆ ಸಿಕ್ಕಿದೆ. ಸಾಹಿತ್ಯದಲ್ಲಿ ನೊಬೆಲ್: ದಿ ರಿಮೇನ್ಸ್ ಆಫ್ ದಿ ಡೇ’ ಕಾದಂಬರಿ ಖ್ಯಾತಿಯ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರಿಗೆ ಸಾಹಿತ್ಯ ನೊಬೆಲ್‍ಪ್ರಶಸ್ತಿ ಲಭಿಸಿದೆ.
ಅಪಾರ್ಟ್‍ಮೆಂಟಿನಲ್ಲಿ ಅಗ್ನಿ ದುರಂತ : ಅಮೆರಿಕ ಗಗನಚುಂಬಿ ನಗರಿ ನ್ಯೂಯಾರ್ಕ್ ಬ್ರೋಂಕ್ಸ್‍ನ ಬರ್ರೋದಲ್ಲಿ ಡಿ.28 ರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.