ಶ್ರೀಮಂಗಲ, ಡಿ. 31: ಗುರು ಇಲ್ಲದೆ, ಹೆಚ್ಚಿನ ಶಿಕ್ಷಣವು ಇಲ್ಲದೆ ಆಪಾರ ಜ್ಞಾನ ಶಕ್ತಿಯಿಂದ ವಿಚಾರಗಳನ್ನು ತಮ್ಮ ಕೃತಿ, ನಾಟಕ, ಕವಿತ್ವದಿಂದ ಸಮಾಜಕ್ಕೆ ಮುಟ್ಟಿಸಿದ ಹರದಾಸ ಅಪ್ಪಚ್ಚ ಕವಿ ವಿಶ್ವಕ್ಕೆ ಸರ್ವಕಾಲಿಕ ಸ್ಫೂರ್ತಿಯಾಗಿದ್ದಾರೆ. ಅಪ್ಪಚ್ಚ ಕವಿಯ ವಿಚಾರ ಮನುಕುಲ ದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಉತ್ತೇಜನಕಾರಿ ಎಂದು ಹಿರಿಯ ಪತ್ರಕರ್ತ ಚಿಲ್ಲಜಮ್ಮಂಡ ನಾ ಸೋಮೇಶ್ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಕೊಡವ ಸಮಾಜ ಮತ್ತು ಅಖಿಲ ಅಮ್ಮಕೊಡವ ಸಮಾಜ ಆಯೋಜಿಸಿದ ಅಪ್ಪಚ್ಚ ಕವಿ ಅವರ 150ನೇ ಜನ್ಮೋತ್ಸವಕಾರ್ಯಕ್ರಮದಲ್ಲಿ ಮಾತನಾಡಿದರು.

ಅಪ್ಪಚ್ಚ ಕವಿ ಕಣ್ಮರೆಯಾಗಿ 74 ವರ್ಷವಾದರೂ ಅವರ ಸ್ಮರಣೆ ಮಾಡಲು ಅವರು ಸಮಾಜಕ್ಕೆ ನೀಡಿದ ಮಹಾನ್ ಕೊಡುಗೆ ಕಾರಣ. ಅವರಿಗಾಗಿ ಅವರು ಏನನ್ನು ಮಾಡಿಕೊಳ್ಳದೆ ಭಕ್ತಿಯಿಂದ ಈ ನೆಲ ಸಂಸ್ಕøತಿ, ಸಮಾಜ, ಆಧ್ಯಾತ್ಮಿಕ, ದೇಶ ಪ್ರೇಮದತ್ತ ಕಣ್ತೆರೆಯುವಂತೆ ತಮ್ಮ ಕೃತಿಯಲ್ಲಿ ಯಾವದೇ ಬೇಧ ಭಾವ ಮಾಡದೆ ವಿಚಾರವನ್ನು ಸಮಾಜಕ್ಕೆ ತಲುಪಿಸಿದ ಮಹಾಪುರುಷ ಎಂದರು.

ಕೊಡಗಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಅಪ್ಪಚ್ಚಕವಿ ಅವರ ಕವಿತ್ವ, ವಿಚಾರಧಾರೆಗಳನ್ನು ತಿಳಿಯಲು ಅವರ ಕೃತಿ ಓದಲೇಬೇಕು. ಓದಿದಾಗ ಮಾತ್ರ ನಮ್ಮ ಅಂತರಾತ್ಮದ ಕಣ್ಣು ತೆರೆಯುತ್ತದೆ. ನಮ್ಮ ಸ್ವಯಂಕೃತ ಅಪರಾಧÀದಿಂದ ಇಂದು ನಾವು ನಮ್ಮ ನೆಲ, ನೆಲೆ, ಸಂಸ್ಕøತಿ, ವ್ಯಕ್ತಿತ್ವಗಳನ್ನು ಕಳೆದುಕೊಳ್ಳುವ ಸನ್ನಿವೇಶದಲ್ಲಿದ್ದೇವೆ. ಭಾರತವು

(ಮೊದಲ ಪುಟದಿಂದ) ಹಿಂದು ಸಂಸ್ಕøತಿಯ ನೆರಳಲ್ಲಿ, ಕರ್ನಾಟಕ ಕನ್ನಡ ಸಂಸ್ಕøತಿಯ ನೆರಳಲ್ಲಿ ಹಾಗೆಯೇ ಕೊಡಗು ಕೊಡವಾಮೆಯ ಸಿರಿ ಸಂಸ್ಕøತಿಯ ನೆರಳಲ್ಲಿ ಎಲ್ಲರಿಗೂ ಸ್ಫ್ಪೂರ್ತಿದಾಯಕವಾಗಿದೆ. ಇವೆಲ್ಲವನ್ನು ಒಂದು ಜಾತಿ ಅಥವಾÀ ಧರ್ಮಕ್ಕೆ ಸೀಮಿತವಾಗಿ ನೋಡುವ ಮನೋಭಾವವನ್ನು ಬಿಡಬೇಕಾಗಿದೆ ಕೊಡವರು, ಅಮ್ಮಕೊಡವರು ಒಂದೇ ಎನ್ನುವ ಮನೋಭಾವನೆ ಬೆಳಸಿ ಕೊಂಡರೆ ನಮ್ಮದಾರಿಗೆ ಇನ್ನೊಬ್ಬರು ಮುಳ್ಳುಬೇಲಿ ಹಾಕಲು ಸಾಧ್ಯವಿಲ್ಲ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಅಪ್ಪಚ್ಚಕವಿ ಕೊಡವ ಭಾಷೆಗೆ ಕಾಯಕಲ್ಪ ನೀಡಿದ ಮಹಾನ್ ಪುರುಷ. ಯುವ ಪೀಳಿಗೆಗೆ ಆದಿ ಕವಿಯ ಬಗ್ಗೆ ಅರಿವು ಮೂಡಿಸಲು ಕವಿಯ ಜನ್ಮೋತ್ಸವವನ್ನು ಆಚರಿಸಲಾ ಗುತ್ತಿದೆ. ಅವರ ನಾಟಕ ಭಾಷಾಂತರ ವಾದರೆ ಪ್ರಪಂಚದಾದ್ಯಂತ ಖ್ಯಾತಿ ಪಡೆಯಲಿದೆ. ಕವಿಯು ಕೊಡವ ಜಾನಪದ ಕಲೆ, ನಾಟಕ, ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೆಮ್ಮಚ್ಚಿಮನೆ ಮೀನಾಕ್ಷಿ ಗೋಪಾಲ್ ಮಾತನಾಡಿ, ಕೊಡವ-ಅಮ್ಮಕೊಡವರು ಒಂದೇ ನಾಣ್ಯದ ಎರಡು ಮುಖದಂತೆ ಹಿಂದಿನಿಂದಲೂ ಪರಸ್ಪರ ಬಾಂಧವ್ಯ ಹಾಗೂ ಸಹಕಾರ ಮನೋಭಾವ ದಿಂದ ಜೀವಿಸುತ್ತಾ ಬಂದವರು. ಅಪ್ಪಚ್ಚಕವಿಯ ನಾಟಕ, ವಿಚಾರಧಾರೆ, ಜೀವನ, ಕಲೆ, ಸಾಹಿತ್ಯ ಸೃಷ್ಟಿಸುವ ಸಂದರ್ಭ ಕವಿಯು ತನಗೆ ಬಂದ ಕಷ್ಟವನ್ನು ಎದುರಿಸಿದ ರೀತಿ ಧೈರ್ಯ, ಸಾಹಸ ಇತ್ಯಾದಿ ಅನುಕರಣೀಯ ಎಂದರು.

ಅಪ್ಪಚ್ಚ ಕವಿ ಜನ್ಮೋತ್ಸವ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪ ಮಾತನಾಡಿ ಅಪ್ಪಚ್ಚ ಕವಿ ಪ್ರಾತಃಕಾಲದ ಸ್ಮರಣೀಯ ವ್ಯಕ್ತಿ. ಅವರು ದೇವರಿಗೆ ಸಮಾನ ಎಂದ ಅವರು ಕವಿಯ ಜನ್ಮೋತ್ಸವ ಆಚರಣೆ, ಅದರ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅಪ್ಪಚ್ಚ ಕವಿ ಅವರ ಜನ್ಮೋತ್ಸವವನ್ನು ಕೊಡವರು ಮತ್ತು ಅಮ್ಮಕೊಡವರು ಒಂದಾಗಿ ಸೇರಿಕೊಂಡಾಡುತ್ತಿರುವದು ಹೆಮ್ಮೆಯ ವಿಷಯ. ಕವಿಯ ಸಾಧನೆ ಎಲ್ಲರಿಗೂ ಅನುಕರಣೀಯವಾದದ್ದು. ಕೊಡವರು-ಅಮ್ಮಕೊಡವರು ಸೌಹಾರ್ಧತೆಯ ಸಂಕೇತವಾಗಿ ಹಿಂದಿ ನಿಂದಲೂ ಬದುಕುತ್ತಾ ಬಂದಿದ್ದಾರೆ, ಮುಂದೆಯೂ ಒಂದಾಗಿ ನಡೆದಾಗ ಕೊಡವ ಸಂಸ್ಕøತಿ, ಸಂಸ್ಕಾರ ಉಳಿಸಿ ಕೊಡಗಿನ ಹಿತಾಸಕ್ತಿ ಕಾಪಡಲು ಸಾದ್ಯ ಎಂದರು. ಈ ಸಂದರ್ಭ ಅಪ್ಪಚ್ಚ ಕವಿ ರಚಿತ ಕೆಲವು ಹಾಡುಗಳನ್ನು ಕಲಾವಿದರಾದ ಮದ್ರೀರ ಸಂಜು ಬೆಳ್ಯಪ್ಪ, ಆಂಗೀರ ಕುಸುಮಾ ಮಾದಪ್ದ, ವಿ.ಟಿ ಶ್ರೀನಿವಾಸ್, ಚಂದ್ರು ಅವರ ತಂಡ ಹಾಡಿ ಗಮನ ಸೆಳೆದರು.

ಬೊಟ್ಯತ್ತ್ ನಾಡ್ ಊರ್‍ತಕ್ಕ ಅಚ್ಚಿಯಂಡ ಬೋಸು, ಅಖಿಲ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ನಂದೇಟಿರ ರಾಜ ಮಾದಪ್ಪ ಹಾಜರಿದ್ದರು. ಪ್ರಜ್ವಲ್-ಮೃದುಲಾ ತಂಡ ಪ್ರಾರ್ಥಿಸಿ, ಅಖಿಲ ಅಮ್ಮ ಕೊಡವ ಸಮಾಜದ ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ ಸ್ವಾಗತಿಸಿ, ಅಮ್ಮತ್ತೀರ ರಂಜಿತಾ ರಾಜೇಶ್ ವಂದಿಸಿದರು.