ಮಡಿಕೇರಿ, ಡಿ. 31: ಮಡಿಕೇರಿ ನಗರವನ್ನು ತಲ್ಲಣಗೊಳಿಸಿದ್ದ ಎರಡು ಸಲಗಗಳ ಸಹಿತ ಕಡಗದಾಳುವಿನಲ್ಲಿ ಕಾಫಿ ತೋಟದ ನಡುವೆ ಕಾಣಿಸಿಕೊಂಡಿದ್ದ ಇನ್ನೆರಡು ಕಾಡಾನೆಗಳನ್ನು ಇಂದು ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸಿ ಆನೆಕಾಡು ಬಳಿಯ ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಅಟ್ಟುವಲ್ಲಿ ಸಫಲಗೊಂಡಿದೆ.

ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದೊಂದಿಗೆ ಮಡಿಕೇರಿ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ್ ಹಾಗೂ ಕುಶಾಲನಗರ ಉಪ ವಲಯ ಅರಣ್ಯಾಧಿಕಾರಿ ರಂಜನ್ ಮತ್ತು ಉಭಯ ಕಡೆಯ ಸಿಬ್ಬಂದಿಯ 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೊರೂರುವಿನಲ್ಲಿ ಬೀಡುಬಿಟ್ಟಿದ್ದ ಈ ನಾಲ್ಕು ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಕಾಡಿಗೆ ಓಡಿಸುವ ಪ್ರಯತ್ನ ನಡೆಯಿತು. ಬಹುಶಃ ನಾಲ್ಕಾರು ಕಾಡಾನೆಗಳು ಹಿಂಡುವಿನಿಂದ ಉಭಯ ಕಡೆಯ ಸಿಬ್ಬಂದಿಯ 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೊರೂರುವಿನಲ್ಲಿ ಬೀಡುಬಿಟ್ಟಿದ್ದ ಈ ನಾಲ್ಕು ಕಾಡಾನೆಗಳನ್ನು ಕಾರ್ಯಾಚರಣೆ ಮೂಲಕ ಕಾಡಿಗೆ ಓಡಿಸುವ ಪ್ರಯತ್ನ ನಡೆಯಿತು. ಬಹುಶಃ ನಾಲ್ಕಾರು ಕಾಡಾನೆಗಳು ಹಿಂಡುವಿನಿಂದ ಈ ಕಾಡಾನೆಗಳು ಆಹಾರವನ್ನು ಅರಸುತ್ತಾ ನಾಡಿಗೆ ಬಂದಿರುವದು ದೃಢಪಟ್ಟಿದ್ದು, ಸಾರ್ವಜನಿಕರು ಕಾಡಾನೆಗಳ ಸುಳಿವು ಲಭಿಸಿದರೆ ಅವುಗಳನ್ನು ಗಾಬರಿಗೊಳಿಸದೆ ಅರಣ್ಯ ಇಲಾಖೆಗೆ ತಿಳಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕೋರಿದ್ದಾರೆ.