ಗೋಣಿಕೊಪ್ಪಲು, ಡಿ. 30: ಇಲ್ಲಿನ ಕಾವೇರಿ ಹಿಲ್ಸ್ ಬಡಾವಣೆಯ ಕಾವೇರಿ ಸಂಘದ ವತಿಯಿಂದ ಹೊಸ ವರ್ಷದ ಪ್ರಯುಕ್ತ ದಿವಂಗತ ಬಲ್ಲಡಿಚಂಡ ಪೊನ್ನಪ್ಪ ಸ್ಮರಣಾರ್ಥ 2ನೇ ವರ್ಷದ ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.
ಬಡವಾಣೆಯ ನಿವಾಸಿಗಳಿಗೆ ಆಯೋಜಿಸಿದ್ದ ಪಂದ್ಯಾವಳಿಯನ್ನು ಗ್ರಾಮ ಪಂಚಾಯ್ತಿ ಸದಸ್ಯ ಜಮ್ಮಡ ಸೋಮಣ್ಣ ಚಾಲನೆ ನೀಡಿದರು. ಬಡವಾಣೆಯ 40ಕ್ಕೂ ಹೆಚ್ಚೂ ನಾಗರೀಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯ ವಿಜೇತರು 1 ರಿಂದ 4ನೇ ತರಗತಿಯ ಡಬಲ್ಸ್ ವಿಭಾಗದಲ್ಲಿ ರಿಷಿಕ್, ಅಜ್ಮಲ್ (ಪ್ರ), ದಿಲನ್, ಮಿಲನ್ (ದ್ವಿ), 5 ರಿಂದ 8ನೇ ತರಗತಿ ವಿಭಾಗದಲ್ಲಿ ಆದರ್ಶ್, ಧಕ್ಷೀತ್ (ಪ್ರ), ಪ್ರಜ್ವಲ್, ದರ್ಶನ್ (ದ್ವಿ), ಬಾಲಕಿಯರ ವಿಭಾಗದಲ್ಲಿ ಶಿವಾನಿ, ವಂದನ (ಪ್ರ), ಭೂಮಿಕ, ಪ್ರೇಕ್ಷ (ದ್ವಿ), ಪದವಿ ಪೂರ್ವ ಬಾಲಕರ ವಿಭಾಗದಲ್ಲಿ ನಿಶಾನ್, ಗಣಪತಿ (ಪ್ರ), ಬಿಶಾನ್, ರಿಜ್ವಾನ್ (ದ್ವಿ), ಪುರುಷರ ವಿಭಾಗದಲ್ಲಿ ರಫೀಕ್, ಹೊಂಬಾಳಯ್ಯ (ಪ್ರ), ಶ್ರೀಕಾಂತ್, ಜುನೈದ್ (ದ್ವಿ), ದಂಪತಿಗಳ ವಿಭಾಗದಲ್ಲಿ ರಫೀಕ್, ತಫ್ಸೀದ (ಪ್ರ), ಹರೀಶ್, ಜಿಷ (ದ್ವಿ), ಮಹಿಳೆಯರ ವಿಭಾಗದಲ್ಲಿ ಜಿಷಾ ಹರೀಶ್, ತಫ್ಸೀದ ರಫೀಕ್ (ಪ್ರ), ತಿರುನೆಲ್ಲಿಮಾಡ ಧನು ಜೀವನ್, ಆ್ಯನ್ಸಿ (ದ್ವಿ) ಸ್ಥಾನ ಪಡೆದರು.
ತಾ. 31 ರಂದು ಕಾವೇರಿ ಹಿಲ್ಸ್ ಬಡವಾಣೆಯಲ್ಲಿ ಜರುಗುವ ಹೊಸವರ್ಷಾಚರಣೆ ಅದ್ಧೂರಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದು. ಸಂಘದ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಕಾರ್ಯದರ್ಶಿ ರಫೀಕ್, ಸಂಘದ ನಿರ್ದೇಶಕರುಗಳಾದ ಅಜ್ಜಿಕುಟ್ಟೀರ ದೇವಯ್ಯ, ಚೋನಿರ ಸತ್ಯ, ಹರೀಶ್, ಪ್ರಜೀಶ್, ಥೋಮಸ್, ಪ್ರಶಾಂತ್, ಅಣ್ಣಯ್ಯ, ಕುಂಬೇರ ಗಣಪತಿ, ಕರಣ್, ಗ್ರಾ.ಪಂ ಸದಸ್ಯರಾದ ಪ್ರಭಾವತಿ, ಧನಲಕ್ಷ್ಮಿ ಇದ್ದರು.