ಮಡಿಕೇರಿ, ಡಿ. 30: ಹಾಕಿ ಇಂಡಿಯಾ ವತಿಯಿಂದ ಅಸ್ಸಾಂನ ಹಾಜೋದಲ್ಲಿ ಜನವರಿ 6 ರಿಂದ 14ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಬ್ಜೂನಿಯರ್ ಹಾಕಿ ಚಾಂಪಿಯನ್ ಶಿಪ್-2018ರಲ್ಲಿ ಹಾಕಿ ಕೂರ್ಗ್ ಸಬ್ಜೂನಿಯರ್ ತಂಡ ಪಾಲ್ಗೊಳ್ಳಲಿದೆ. ಈ ತಂಡ ಜ. 1 ರಂದು ಪ್ರಯಾಣ ಬೆಳೆಸಲಿದೆ. ಹಾಕಿ ಕೂರ್ಗ್ ತಂಡವನ್ನು ಪ್ರಕಟಿಸಿದ್ದು 22 ಆಟಗಾರರು ಆಯ್ಕೆಯಾಗಿದ್ದಾರೆ.
ತಂಡ: ಚೇತನ್ ಎಂ.ಕೆ. (ನಾಯಕ), ಸುಜಯ್ ಡಿ.ಜಿ. ಹಾಗೂ ಮೋಹಿತ್ ಹೆಚ್.ಎಸ್. (ಗೋಲ್ಕೀಪರ್) ಗಾಯನ್ ಗಣಪತಿ ಬಿ.ಬಿ., ಶರತ್ ಸಿ, ನಿಖಿಲ್ ಜೋಸೆಫ್ ಕೆ.ಜೆ., ಅನಂತ್ ಹೆಚ್.ಎಂ., ತರುಣ್ ಎನ್.ಟಿ., ಅಖಿಲ್ ತಮ್ಮಯ್ಯ ಎಂ.ಯು., ಮಹಮದ್ ಹುಮೈಜ್, ಯಶವಂತ್ ಕೆ.ಎಂ., ರಕ್ಷಿತ್ ಕಾರ್ಯಪ್ಪ ಎ.ಡಿ., ಮೋನಿಷ್ ಮಂದಣ್ಣ ಎಂ.ಎಸ್., ನಿಕಿತ್ ಸಿ.ಜಿ., ಅರ್ಜುನ್ ಬಿ., ಗೌತಮ್ ಎಂ.ಎ., ವಿಘ್ನೇಶ್ ಬಿ.ಎಸ್., ದೀಕ್ಷಿತ್ ಎಸ್.ಕೆ., ತರಬೇತುದಾರರಾಗಿ ಮಧು ಮಂದಣ್ಣ ಹಾಗೂ ವ್ಯವಸ್ಥಾಪಕರಾಗಿ ವಿನೋದ್ ಕುಮಾರ್ ಎಂ.ವಿ. ತೆರಳಲಿದ್ದಾರೆ.