ಸುಂಟಿಕೊಪ್ಪ, ಡಿ. 30 : ಇಲ್ಲಿನ ನಾಡ ಕಚೇರಿಯ ಸಮೀಪದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸರಬರಾಜು ಇಲ್ಲದಿರುವ ದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶಾಸಕರ ನಿಧಿಯಲ್ಲಿ ಆರಂಭವಾದ ಈ ಶುದ್ಧ ಕುಡಿಯುವ ನೀರಿನ ಘಟಕವು ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ತೆರೆಯಲಾಗಿತ್ತು. ಆದರೆ ಕಳೆದ ಒಂದು ವಾರಗಳಿಂದ ನೀರಿನ ಸರಬರಾಜಿಗೆ ಅಳವಡಿಸಿದ್ದ ಮೋಟಾರು 8 ತಿಂಗಳಲ್ಲೇ ಕೆಟ್ಟುಹೋಗಿದರ ಪರಿಣಾಮವಾಗಿ ನೀರಿನ ಸರಬರಾಜು ಇಲ್ಲದೇ ಘಟಕ ಬಾಗಿಲು ಮುಚ್ಚಿದೆ.
ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರು ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟು ನೀರಿನ ಪೂರ್ಯೆಕೆ ಮಾಡಿಕೊಡಲಿ ಎಂದು ಮಾಜಿ ಪಂಚಾಯಿತಿ ಅದ್ಯಕ್ಷೆ ಬಿ.ಐ. ಭವಾನಿ ಹಾಗೂ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.