ಮಡಿಕೇರಿ, ಡಿ. 30: ಕೊಡಗಿನ ಪುಣ್ಯಕ್ಷೇತ್ರವಾದ ಶ್ರೀ ತಲಕಾವೇರಿ - ಭಗಂಡೇಶ್ವ ಸನ್ನಿಧಿಯಿಂದ ಸುಮಾರು 24 ಕಿ.ಮೀ. ದೂರದಲ್ಲಿ ಬರುವ ಪ್ರದೇಶ ಮಡಿಕೇರಿ ತಾಲೂಕಿನ ಗಡಿಭಾಗ ಕರಿಕೆ. ಕೇರಳ ರಾಜ್ಯಕ್ಕೆ ಒತ್ತಿಕೊಂಡಂತಿರುವ ಕರಿಕೆಯಲ್ಲಿ ಕರುನಾಡಿನ ವೈಭವ - ಸಾಹಿತ್ಯ ಸಂಗಮ ಮೇಳೈಸುವದರೊಂದಿಗೆ ಗಡಿಯಲ್ಲ್ಲಿ ಕನ್ನಡದ ಕಂಪು ಪಸರಿಸಿತು.ಮಡಿಕೇರಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ವತಿಯಿಂದ ಕರಿಕೆಯ ಸ್ಥಳೀಯರ ವಿಶೇಷ ಸಹಕಾರದೊಂದಿಗೆ ಯಶಸ್ವಿಯಾಗಿ ಜರುಗಿತು. ಕರುನಾಡಿನ ಸಂಸ್ಕøತಿ - ಆಚಾರ ವಿಚಾರಗಳನ್ನು ಪ್ರತಿಬಿಂಬಿಸಿ ನಡೆದ ಮೆರವಣಿಗೆ ಹಚ್ಚಹಸಿರಿನ ಕಾನನದ ನಡುವಿನ ಹಾದಿಯಲ್ಲಿ ಆಕರ್ಷಕವಾಗಿ ಮೂಡಿಬಂದಿತು.

ಸುಮಾರು ಎರಡು ಕಿ.ಮೀ. ಅಂತರದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ಕಾಟೂರು ನಾರಾಯಣ ನಂಬಿಯಾರ್ ಸ್ಮಾರಕ ವಿದ್ಯಾಲಯ ಆವರಣದಲ್ಲಿ ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರನ್ನು ತೆರೆದ ವಾಹನದೊಂದಿಗೆ ಕರೆದೊಯ್ದ ಮೆರವಣಿಗೆ ಆಕರ್ಷಕವಾಗಿತ್ತು. ಮಡಿಕೇರಿ ತಾಲೂಕು ತಹಶೀಲ್ದಾರ್ ಕುಸುಮ ಅವರು ಡೋಲು ಬಾರಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದರು. ಸ್ವಾಗತ ಸಮಿತಿಯ ಅಧ್ಯಕ್ಷರಾದ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ವಿವಿಧ ಸಂಘ-ಸಂಸ್ಥೆಗಳು, ಮಹಿಳೆಯರು ಪೂರ್ಣಕುಂಭ ಕಲಶ ಹಿಡಿದು ಸಾಗಿದರೆ, ವಿವಿಧ ಕಲಾ ತಂಡಗಳಿಂದ ಡೊಳ್ಳು ಕುಣಿತ, ಕನ್ನಡ ನಾಡಿನ ಸಾಧಕರನ್ನು ಪ್ರತಿಬಿಂಬಿಸುವ ವಿವಿಧ ವೇಷದಾರಿ ವಿದ್ಯಾರ್ಥಿಗಳು ಗಮನ ಸೆಳೆದರು. ಎರಡು ಕಿ.ಮೀ. ದೂರ ಸಾಗಿದ ಮೆರವಣಿಗೆ ಸಮಾರಂಭ ಆಯೋಜಿತಗೊಂಡಿದ್ದ ಕರಿಕೆ ಎಳ್ಳುಕೊಚ್ಚಿಯ ಬೇಕಲ್ ಮೈದಾನದಲ್ಲಿ ಸಮಾಪನಗೊಂಡಿತು.

(ಮೊದಲ ಪುಟದಿಂದ) ಮಾರ್ಗದುದ್ದಕ್ಕೂ ಕನ್ನಡ ಪರ ಘೋಷಣೆಗಳು ಮೊಳಗಿದವು. ಕನ್ನಡದ ವಿವಿಧ ನಾಣ್ಣುಡಿಗಳು ಈ ವಿಭಾಗದಲ್ಲಿ ಕನ್ನಡ ಧ್ವಜ ಭಿತ್ತಪತ್ರ, ಬ್ಯಾನರ್‍ನೊಂದಿಗೆ ಕನ್ನಡದ ಮಹತ್ವವನ್ನು ಸಾರಿತು. ಅಲಂಕೃತ ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಮೆರವಣಿಗೆಯಲ್ಲಿ ಸಾಗಿದರು. ಕೆಲವರು ದ್ವಿಚಕ್ರ ವಾಹನದಲ್ಲಿ ಕನ್ನಡದ ಧ್ವಜದೊಂದಿಗೆ ಸಾಗಿದರು. ಮಹಿಳೆಯರ ಚಂಡೆವಾದ್ಯ, ಡೊಳ್ಳುಕುಣಿತ, ಪೂಜಾ ಕುಣಿತ ಗಮನ ಸೆಳೆಯಿತು.

ಸಮ್ಮೇಳನದ ಅಂಗವಾಗಿ ಮೂರು ದ್ವಾರಗಳನ್ನು ನಿರ್ಮಿಸಲಾಗಿದ್ದು, ಈ ದ್ವಾರದ ಮೂಲಕ ಮೆರವಣಿಗೆ ಸಾಗಿತು. ಪದ್ಮನಾಭ ಸರಳಾಯ ದ್ವಾರ, ಕಾಟೂರು ನಾರಾಯಣ ನಂಬಿಯಾರ್ ದ್ವಾರ, ಡಾ. ಬೇಕಲ್ ಸೋಮನಾಥ್ ದ್ವಾರವನ್ನು ಕರಿಕೆಯಲ್ಲಿ ನಿರ್ಮಿಸಲಾಗಿತ್ತು. ಮೆರವಣಿಗೆ ಜಿ.ಟಿ. ನಾರಾಯಣ ರಾವ್ ಸಭಾಂಗಣದ ಪಂಜೆಮಂಗೇಶರಾಯ ವೇದಿಕೆಯಲ್ಲಿ ಸಮಾಪನಗೊಂಡಿತು.

(ಮೊದಲ ಪುಟದಿಂದ) ಪ್ರಕಟಿಸುವದು ವಾಡಿಕೆಯಾಗಿದೆ. ಸ್ವಂತಿಕೆಯನ್ನು ಕವಿಮನ ಮರೆತಂತಿದೆ. ಕಲಿಕೆ ಒಂದು ಕಲ್ಲಿದ್ದಂತೆ. ಸಂಸ್ಕøತಿ ಆ ಕಲಿಕೆಯ ಹೊಳಪು. ಕಲಿಕೆಗೆ ತೂಕವಿದೆ, ಪದವಿ ಇದೆ. ಪದವಿಯಿಂದ ಬರುವ ನೌಕರಿಗೆ ಮಾತ್ರ ಬೆಲೆ ಕೊಡದೆ, ಕಲಿಕಾ ಸಂಸ್ಕøತಿಗೆ ಬೆಲೆ ಕೊಡಬೇಕಾಗಿದೆ. ಸಂಸ್ಕøತಿ ಕಲಿಕೆಯನ್ನು ಹೊಳೆಯುವಂತೆ ಮಾಡುತ್ತದೆ ಎಂದರು.

ಕರ್ನಾಟಕದಲ್ಲಿ, ಕನ್ನಡಮ್ಮನ ಮಡಲಲ್ಲಿ, ಕನ್ನಡ, ತಮಿಳು, ತೆಲುಗು, ಮಲೆಯಾಳ, ಕೊಂಕಣಿ, ಬ್ಯಾರಿ, ಕೊಡವ, ಅರೆಭಾಷೆಗಳೂ ತಂತಮ್ಮ ಸ್ಥಾನಮಾನಗಳನ್ನು ಕಂಡುಕೊಂಡಿವೆ. ಇಂದು ಈ ಎಲ್ಲಾ ಭಾಷೆಗಳ ಜನರೂ ನಿಂತ ನೆಲ ಕನ್ನಡ ನೆಲ ಎಂದು ಸಮ್ಮೇಳನಾಧ್ಯಕ್ಷರು ನೆನಪಿಸಿದರು.

ಕನ್ನಡದ ಮೇಲಿನ ಪ್ರೀತಿ ಅನ್ಯ ಭಾಷೆಗಳ ಮೇಲಿನ ದ್ವೇಷ ಆಗಬಾರದು. ಭಾರತವು ಸರ್ವ ಜನಾಂಗಗಳ ಶಾಂತಿಯ ತೋಟ. ಬಗೆ ಬಗೆಯ ಪುಷ್ಪಗಳ ಸಮಾಗಮವು ಕನ್ನಡಮ್ಮನ ಬೃಂದಾವನಕ್ಕೇ ಸೌಂದರ್ಯವನ್ನೀಯಲಿ ಎಂದು ಆಶಿಸಿದರು.

ವನ್ಯ ಪ್ರಾಣಿಗಳ ಅಟ್ಟಹಾಸ ಇಂದು ಪಟ್ಟಣಗಳಲ್ಲಿ ತಲೆದೋರುತ್ತಿದೆ. ಸತ್ತವರಿಗೆ ನಾನೊಂದು ಲಕ್ಷ, ಮತ್ತೊಬ್ಬರು ಒಂದು ಲಕ್ಷ ಕೊಡುವಾಗ ಜೀವ ಹಿಂಬರುವದೇ? ಇದಕ್ಕೆ ಪರಿಹಾರ ಹುಡುಕಬೇಕು. ಕಾಡುಗಳನ್ನು ಉಳಿಸಬೇಕು. ಹಿಂದೆ ಆಂಗ್ಲರು ತಾವೇ ಈ ನೆಲವನ್ನು ಮುಂದಕ್ಕೂ ಆಳುವೆವೆಂಬ ಭರವಸೆಯ ಮೇಲೆ, ದೇವರ ಕಾಡುಗಳನ್ನೂ, ರಕ್ಷಿತ ಅರಣ್ಯಗಳನ್ನೂ ಸಂರಕ್ಷಿಸಿದ್ದರು. ಬೇಟೆ, ಒಂದು ಆಟವಾಗಿತ್ತು. ಅಷ್ಟೇ ಪ್ರಾಣಿಗಳೂ ಇದ್ದವು. ಅವುಗಳಿಗೆ ಆಯಾ ಜಾತಿಯ ಮೃಗಕ್ಕೆ ತಕ್ಕಂತೆ ಸೃಷ್ಟಿಯ ನಿಯಮದಂತೆ ವನದಲ್ಲೇ ಅವುಗಳಿಗಿರುವ ಭಕ್ಷ್ಯಗಳಿದ್ದವು. ಇಂದು ಮಾನವನ ಆಸೆಗೆ ಅಂತ್ಯವಿಲ್ಲದಾಗಿ ಮರಗಳನ್ನು ಬೇಕಾಬಿಟ್ಟಿ ಕಡಿದು ನೀರ್ಕುಡಿಯುತ್ತಿದ್ದಾರೆ. ಇದು ದಂಧೆಯಾಗಿದೆ. ಇದಕ್ಕೆ ಕಡಿವಾಣವಿಲ್ಲವೇ? ಇದರಿಂದಾಗಿ ಪಾಪದ ಪ್ರಾಣಿಗಳು ಪಟ್ಟಣ ಪ್ರವೇಶಿಸಿದರೆ, ಅವರ ತಪ್ಪೇನು? ಎಂದು ಶೋಭಾ ಸುಬ್ಬಯ್ಯ ಪ್ರಶ್ನಿಸಿದರು.