ಕುಶಾಲನಗರ, ಡಿ. 30: ಕುಶಾಲನಗರ ಪಟ್ಟಣದ ಐಡಿಎಸ್‍ಎಂಟಿ ಯೋಜನೆಯ ಸಭೆ ಶನಿವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ಪ್ರಥಮ ಹಂತದ 26.9 ಎಕ್ರೆ ಪೈಕಿ 1200 ಚದರ ಅಡಿಗಳಿಗಿಂತ ಕಡಿಮೆ ಇರುವ 154 ನಿವೇಶನಗಳನ್ನು ಸಮಿತಿ ನಿಗದಿಪಡಿಸಿ ರುವ ದರದ ಅರ್ಧದಷ್ಟು ಮೊತ್ತಕ್ಕೆ ಅರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಮೀಸಲಾತಿ ಅನ್ವಯ ಹಂಚಿಕೆ ಮಾಡಲು ಅರ್ಜಿ ಆಹ್ವಾನಿಸಲು ನಿರ್ದೇಶಿಸಲಾಯಿತು.

ಕುಶಾಲನಗರ ಪಟ್ಟಣ ವ್ಯಾಪ್ತಿಯ ವಸತಿ ಮತ್ತು ನಿವೇಶನ ರಹಿತ ದುರ್ಬಲ ವರ್ಗದವರಿಗೆ ಶೇ.50 ರಷ್ಟು ಪ್ರಾತಿನಿಧ್ಯ ನೀಡಲು ಸಭೆ ತೀರ್ಮಾನ ಕೈಗೊಂಡಿದೆ.

ಸಭೆಯಲ್ಲಿ ಐಡಿಎಸ್‍ಎಂಟಿ ಯೋಜನೆ ಸಮಿತಿ ಉಪಾಧ್ಯಕ್ಷ ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಯೋಜನಾ ನಿರ್ದೇಶಕÀ ಗೋಪಾಲಕೃಷ್ಣ, ಭೂದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದೀನ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಹೆಚ್.ಎಸ್.ಪ್ರಭು, ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೌಮ್ಯ, ಕುಶಾಲನಗರ ಪ.ಪಂ. ಅಧ್ಯಕ್ಷೆ ರೇಣುಕಾ, ಮುಖ್ಯಾಧಿಕಾರಿ ಎ.ಎಂ .ಶ್ರೀಧರ್, ಪಂಚಾಯಿತಿ ಕಿರಿಯ ಅಭಿಯಂತರರಾದ ಶ್ರೀದೇವಿ ಇದ್ದರು.