ಶ್ರೀಮಂಗಲ, ಡಿ. 30: ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಪೊನ್ನಂಪೇಟೆ ಗ್ರಾ.ಪಂ. ಕಚೇರಿಗೆ ಭೇಟಿ ನೀಡಿ ಗ್ರಾ.ಪಂ.ನ ಅಧ್ಯಕ್ಷರು ಹಾಗೂ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಕುಂದುಕೊರತೆ ಆಲಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷರಾದ ಮೂಕಳೇರ ಸುಮಿತಾ ಮತ್ತು ಸದಸ್ಯರು ಜಿ.ಪಂ. ಸದಸ್ಯೆ ಶ್ರೀಜಾ ಅಚ್ಯುತ್ತನ್ ಸೇರಿದಂತೆ ಸಾರ್ವಜನಿಕರು ಜನರ ಪ್ರಮುಖ ಬೇಡಿಕೆಯಾದ ಪೊನ್ನಂಪೇಟೆ ತಾಲೂಕು ರಚನೆಗೆ ಹಾಗೂ ಜಿಲ್ಲೆಯ ರೈತರಿಗೆ ಮಾರಕವಾದ ಹಾಗೂ ರೈತರು ಜಾಗ ಕಳೆದುಕೊಳ್ಳುವ ಆತಂಕದಿಂದ ಹೈಟೆನ್ಷನ್ ವಿದ್ಯುತ್ ಯೋಜನೆ ಅನುಷ್ಠಾನದ ವಿರುದ್ಧ ಹೋರಾಟ ನಡೆಸಿದ ಸಂದರ್ಭ ಬಹಳಷ್ಟು ರೈತರ ಮೇಲೆ ಪೊಲೀಸರು ಮೊಕದಮ್ಮೆ ದಾಖಲಿಸಿದ್ದು, ಇದನ್ನು ವಾಪಾಸು ಪಡೆಯುವಂತೆ ಮಾಡಲು ಕೋರಿದರು. ಈಗಾಗಲೇ ಕೊಡಗು ಬೆಳೆಗಾರರ ಒಕ್ಕೂಟದಿಂದ ಮನವಿ ಬಂದಿದೆ. ಈ ಬಗ್ಗೆ ಗೃಹ ಸಚಿವ ರಾಮಲಿಂಗರೆಡ್ಡಿ ಅವರ ಗಮನ ಸೆಳೆಯಲಾಗಿದೆ. ಸಂಬಂಧಿಸಿದ ಮೊಕದ್ದಮೆಯ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಾರ್ವಜನಿಕರ ಅಹವಾಲಿಗೆ ವೀಣಾ ಈ ಬಗ್ಗೆ ಪ್ರಯತ್ನ ಮುಂದುವರಿಸುವದಾಗಿ ಹೇಳಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಅಣ್ಣೀರ ಹರೀಶ್, ಚಂದ್ರ ಸಿಂಗ್, ರಸಿಕಾ, ಅನೀಶ್, ಮೂಕಳೇರ ಲಕ್ಷ್ಮಣ, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ತಾ.ಪಂ. ಮಾಜಿ ಸದಸ್ಯ ಸಾಜಿ ಅಚ್ಯುತ್ತನ್, ಪೊನ್ನಂಪೇಟೆ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಪುಲಿಯಂಡ ಜಗದೀಶ್ ಮತ್ತಿತರರು ಹಾಜರಿದ್ದರು.