ಗೋಣಿಕೊಪ್ಪ ವರದಿ, ಡಿ. 30: ಇಲ್ಲಿನ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ ಪ್ರಾಥಮಿಕ ಶಾಲೆಯ ಬೆಳ್ಳಿಮಹೋತ್ಸವ ನಡೆಯಿತು.
ಪ್ರಾಥಮಿಕ ಶಾಲೆಯನ್ನು ಕಟ್ಟಿ ಬೆಳೆಸಿದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಬುಟ್ಟಿಯಂಡ ಅಪ್ಪಾಜಿ ಮತ್ತು ಚೆಕ್ಕೇರ ಪಿ. ಸೋಮಯ್ಯ ಅವರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಉಪನ್ಯಾಸಕಿ ಎಂ. ರೇವತಿ ಪೂವಯ್ಯ ಮಾತನಾಡಿ, ಸಣ್ಣ ವಯಸ್ಸಿನಲ್ಲಿ ಮುಂದೆ ಏನಾಗಬೇಕು ಎಂಬ ಸ್ಪಷ್ಟಕಲ್ಪನೆ ಇರಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಕೀಳರಿಮೆಯನ್ನು ತ್ಯಜಿಸಿ ಮುನ್ನಡೆಯಬೇಕು ಎಂದರು.
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಹೆಚ್.ಕೆ. ಪಾಂಡು, ಕ್ಷೇತ್ರ ಶಿಕ್ಷಣಾಧಿಕಾರಿ ಅಧಿಕಾರಿ ಜಿ.ಎ. ಲೋಕೇಶ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ. ಚಿಣ್ಣಪ್ಪ, ಮುಖ್ಯ ಶಿಕ್ಷಕರರುಗಳಾದ ಬಿ.ಟಿ. ರತೀಶ್‍ರೈ ಮತ್ತು ಎ.ಎ. ಪಾರ್ವತಿ ಉಪಸ್ಥಿತರಿದ್ದರು. ಕೀರ್ತಿ, ಚರಿಷ್ಮ, ಮತ್ತು ದೀಪಿಕ ಪ್ರಾರ್ಥಿಸಿದರು. ಡಿ. ಕೃಷ್ಣ ಚೈತನ್ಯ ವಂದಿಸಿದರು.