ಮಡಿಕೇರಿ, ಡಿ. 29: ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರದಿಂದ ಸೌಲಭ್ಯ ಪಡೆದವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುವಂತೆ ಮನವೊಲಿಸಬೇಕಾಗಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ಬಿ.ಜಿ ಮಿಟ್ಟು ಚಂಗಪ್ಪನವರು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿ ಸಭಾಂಗಣದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪರಿಶೀಲನಾ ಸಭೆಯಲ್ಲಿ ಕೆ.ಪಿ.ಸಿ.ಸಿ ಯ ವೀಕ್ಷಕರಾಗಿ ಉಪಸ್ಥಿತರಿದ್ದ ಮಿಟ್ಟು ಚಂಗಪ್ಪ ಅವರು ಕೊಡಗಿನಲ್ಲಿ ಶೇ. 70% ರಷ್ಟು ಮತದಾರರು ಗ್ರಾಮೀಣ ಭಾಗದಲ್ಲಿದ್ದು ಇವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಪಂಚಾಯತ್ ರಾಜ್ ಸಂಘಟನೆ ಮಹತ್ವದ ಕೆಲಸ ನಿರ್ವಹಿಸಿದರೆ ಪಕ್ಷದ ಬಲವರ್ಧನೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ಜಿಲ್ಲೆಂiÀiಲ್ಲಿ ಸಂಘಟನೆಯು ನಡೆಸಿದ ಕಾರ್ಯಕ್ರಮಗಳ ವಿವರಗಳನ್ನು ರಾಜ್ಯ ಉಸ್ತುವಾರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದರು.
ವಿವರಗಳನ್ನು ಪರಿಶೀಲಿಸಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಹುಸೇನ್ ಆರ್.ಜಿ.ಪಿ.ಆರ್ ಸಂಘಟನೆ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದು ಕೆ.ಪಿ.ಸಿ.ಸಿ ಯಿಂದ ಸಂಪೂರ್ಣ ಸಹಕಾರ ನೀಡಲಾಗುವದು ಎಂದು ತಿಳಿಸಿದರು.
ಸಂಘಟನೆಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಯೋಜಕ ಎಂ.ಎ ರಂಗಸ್ವಾಮಿ ಜನವರಿ ತಿಂಗಳಿನಲ್ಲಿ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಸಚಿವ ಹೆಚ್.ಕೆ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಪಂಚಾಯತ್ ರಾಜ್ ಸಮಾವೇಶ ನಡೆಯಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪನವರು ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳ ಸಾಧನಾಸಂಭ್ರಮ ಸಮಾವೇಶ ಮುಗಿದ ನಂತರ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಿ ಕೆ.ಪಿ.ಸಿ.ಸಿಗೆ ತಿಳಿಸಲಾಗುವದೆಂದು ತಿಳಿಸಿದರು. ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ ಚಂದ್ರಕಲಾ ಸದಸ್ಯೆ ತಾರಾ ಐಯ್ಯಮ್ಮ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ ಸುರೇಶ್, ಜಿಲ್ಲಾ ಮಹಿಳಾ ಘಟಕದ ಅಧಕ್ಷೆ ಪುಷ್ಪಾಲತಾ, ಬ್ಲಾಕ್ ಕಾಂಗ್ರೆ ಸ್ ಅಧ್ಯಕ್ಷರುಗಳಾದ ಕೆ.ಎಂ ಲೋಕೇಶ್, ತೀತಿರ ಧರ್ಮಜ ಉತ್ತಪ್ಪ, ಅಬ್ದುಲ್ ಸಲಾಂ, ಬೇಕಲ್ ರಮಾನಾಥ್, ಕಾನೆಹಿತ್ಲು ಮೊಣ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್, ವಿವಿದ ಘಟಕದ ಅಧ್ಯಕ್ಷರುಗಳಾದ ಯಾಕೂಬ್, ನೆರವಂಡ ಉಮೇಶ್, ಐ.ಜಿ ಚಿಣ್ಣಪ್ಪ, ಕೂಡಿಗೆ ಹಮೀದ್, ಬಿ.ಕೆ ಸತೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಕುಮುದಾ ಧರ್ಮಪ್ಪ, ಸುನಿತಾ ಮಂಜುನಾಥ್, ಲತೀಫ್, ತಾಲೂಕು ಸಂಯೋಜಕರಾದ ಪಲ್ವಿನ್ ಪೂಣಚ್ಚ, ಕುಂಬುಗೌಡನ ಪ್ರಸನ್ನ, ಬ್ಯಾಡಗೊಟ್ಟ ಹನೀಫ್, ಮಹಿಳಾ ಘಟಕದ ಪದಾಧಿಕಾರಿಗಳಾದ ಬೇಳೂರು ಮಂಜುಳ, ಮಂಜುಳ ಮಂಜು, ಅಮೀನ, ನಗರಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಇಬ್ರಾಹಿಂ ಸೀದಿ, ಅಜ್ಜಹಳ್ಳಿ ರವಿ, ತೇಜ್‍ಕುಮಾರ್, ಎಸ್.ಸಿ ಘಟಕದ ಸುರೇಶ್ ಟಿ.ಇ, ಶಾಂತಳ್ಳಿ ಪ್ರಕಾಶ್, ಪ್ರವೀಣ್ ಮಾದರವಳ್ಳಿ, ಸೇರಿದಂತೆ ತಾಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.