ಗೋಣಿಕೊಪ್ಪಲು, ಡಿ. 29: ಇತ್ತೀಚೆಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಎನ್.ಎಸ್.ಎಸ್.ಘಟಕ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲ್ ಪದವಿಪೂರ್ವ ಕಾಲೇಜು, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ಬಾಲಕಿಯರ ರಾಜ್ಯಮಟ್ಟದ ಯುವಜನೋತ್ಸವ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಲಾ ವಿಭಾಗದ ವಿದ್ಯಾರ್ಥಿನಿಯರಾದ ಧನ್ಯ ಪಿ.ಆರ್, ರಂಜಿತ ಹೆಚ್.ಜೆ, ಮುತ್ತುಲಕ್ಷ್ಮಿ ಆರ್, ತೇಜಸ್ವಿನಿ ಹೆಚ್.ಹೆಚ್, ಕವಿತ ವೈ.ಬಿ, ದೀಪಿಕ ಸಿ.ಎಂ, ರಕ್ಷಿತ ಹೆಚ್.ಆರ್ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಸಂಗೀತ ಬಿ.ಸಿ, ಅನುಷ ವಿ.ವಿ, ಶಕುಂತಲ ಆರ್.ಎಂ. ಅವರುಗಳು ಭಾಗವಹಿಸಿರುತ್ತಾರೆ.
ಈ ರಾಜ್ಯಮಟ್ಟದ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಗೀತ ಬಿ.ಸಿ. ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡರೆ, ಧನ್ಯ ಪಿ.ಆರ್ ಮತ್ತು ತಂಡದವರು ನೃತ್ಯ ಸ್ಪರ್ಧೆಯಲ್ಲಿ ಕೊಡವ ಸಮೂಹ ನೃತ್ಯವನ್ನು ಪ್ರದರ್ಶಿಸಿ ವಿಶೇಷ ಬಹುಮಾನವನ್ನು ಪಡೆದಿದ್ದಾರೆ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ತಿರುಮಲಯ್ಯ ಎಸ್.ಆರ್. ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.