ಕೂಡಿಗೆ, ಡಿ. 29: ಇತ್ತೀಚೆಗೆ ಮೈಸೂರಿನಲ್ಲಿ ಎರೆಡು ದಿನಗಳ ಕಾಲ ನಡೆದ ನ್ಯಾಷನಲ್ ಇಸ್ಟಿಟ್ಯೂಟ್ ಮೆಮೊರಿ ಯಲ್ ಆರ್ಟ್ ಮತ್ತು ಯೋಗ, ಬ್ಲ್ಯಾಕ್ ಬೆಲ್ಟ್ ಪದವಿ ಪರೀಕ್ಷೆ ನಡೆಯಿತು. ಅದರಲ್ಲಿ ಕೂಡಿಗೆ-ಮತ್ತು ಕೂಡುಮಂಗಳೂರು ವ್ಯಾಪ್ತಿಯ ಮೂವರು ವಿದ್ಯಾರ್ಥಿಗಳು ಬ್ಲ್ಯಾಕ್ ಬೆಲ್ಟ್ ಪಡೆದರು. ದೊಡ್ಡತ್ತೂರು ಗ್ರಾಮದ ಡಿ.ಅರ್. ಶಿವಲಿಂಗ, ಡಿ.ಎನ್. ಯೋಗೇಶ್ ಹಾಗೂ ಯಡವನಾಡು ಗ್ರಾಮದ ಎ.ಎಸ್. ಯತೀಶ್ ಇವರುಗಳು ಬ್ಲ್ಯಾಕ್ ಬೆಲ್ಟ್ ಅಭ್ಯಾಸದ ವಿದ್ಯಾರ್ಥಿಗಳಾಗಿದ್ದು, ಬ್ಲ್ಯಾಕ್ ಬೆಲ್ಟ್ ಪದವಿ ಪುರಸ್ಕಾರ ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ತರಬೇತುದಾರದಾಗಿ ಯಡವನಾಡಿನ ಬ್ಲ್ಯಾಕ್ ಬೆಲ್ಟ್ ಪಟು ಚಂದ್ರು ಕಾರ್ಯನಿರ್ವಹಿಸಿದ್ದರು.