ಮಡಿಕೇರಿ, ಡಿ. 28: ನಗರದ ವ್ಯಾಲಿ ವ್ಯೂವ್ ಹೊಟೇಲ್‍ನಲ್ಲಿ ಭಾರತೀಯ ದಂತ ವೈದ್ಯರ ಸಂಘದ ಕೊಡಗು ಶಾಖೆಯ 2016-17ರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ನಗರದ ದಂತ ವೈದ್ಯ ಡಾ. ರತೀಶ್ ಬಿಳಿಮಲೆಯವರು ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಪ್ರಧಾನ ಕಾರ್ಯ ದರ್ಶಿಯಾಗಿ ಕೊಡಗು ದಂತ ವೈದ್ಯಕೀಯ ಕಾಲೇಜಿನ ಪಾ.ಆರ್ ಕೃಪಾಶಂಕರ ಆಯ್ಕೆಯಾದರು. ಒಟ್ಟು 14 ಹುದ್ದೆಗಳನ್ನೊಳಗೊಂಡ ಭಾರತೀಯ ದಂತ ವೈದ್ಯರ ಸಂಘವು 2017-18 ಕ್ಕೆ ಅಸ್ತಿತ್ವಕ್ಕೆ ಬಂದಿದ್ದು, 2016-17 ನೇ ಸಾಲಿನಲ್ಲಿ ಕೊಡಗು ದಂತ ವೈದ್ಯರ ಶಾಖೆಯ ಒಟ್ಟಾರೆ ವಿವಿಧ ವಿಭಾಗಗಳಲ್ಲಿ 7 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಇನ್ನುಳಿದ ಇತರ ಶಾಖೆಗಳಿಗಿಂತ ಮುಂಚೂಣಿಯಲ್ಲಿದೆ.