ಶ್ರೀಮಂಗಲ, ಡಿ. 28: ‘ಕೊಡವತಕ್ಕ್ ಎಳ್ತ್ಕಾರಡ ಕೂಟ’, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆ ಹಾಗೂ ತಾವಳಗೇರಿ ಮೂಂದ್ ನಾಡ್ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ತಾ. 30ರ (ನಾಳೆ) ಪೂರ್ವಾಹ್ನ 10.30 ಗಂಟೆಗೆ ಕೂಟದ ‘ಜನಪ್ರಿಯಕೊಡವ ಸಾಹಿತ್ಯ ಮಾಲೆ’ ಯೋಜನೆಯ 151ನೇ ಹೆಜ್ಜೆಯ ಲೇಖಕಿ ಅಜ್ಜಾಮಾಡ ಸಾವಿತ್ರಿ ಪೆಮ್ಮಯ್ಯ ಬರೆದ ನೂತನ ಕೊಡವ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ತ್ರಿ ಭಾಷಾ ಸಾಹಿತಿ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದ ‘ಮಂಡೀರ ಜಯಾ ಅಪ್ಪಣ್ಣ ದತ್ತಿ ನಿಧಿ' ಪೈಪೋಟಿ ಕಾರ್ಯಕ್ರಮ ನಡೆಯಲಿದೆ.
‘ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ.ತೀತಿರರೇಖಾ ವಸಂತ್, ಬೆಂಗಳೂರು ಮೈಕ್ರೋಮಿನ್ ಸಂಸ್ಥೆಯ ಮಾಲೀಕ ಮಂಡೀರ ವಿವೇಕ್ಚಂಗಪ್ಪ, ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಲೇಖಕಿ ಅಜ್ಜಾಮಾಡ ಸಾವಿತ್ರಿ ಪೆಮ್ಮಯ್ಯ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಸಾಂಸ್ಕøತಿಕ ಸಂಸ್ಥೆಯ ಗೌರವಾಧ್ಯಕ್ಷೆ ತಡಿಯಂಗಡ ಸಬಿತಾ ರಮೇಶ್ ಪುಸ್ತಕ ಪ್ರಾಯೋಜಕರ ಪರವಾಗಿ ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಸಾಂಸ್ಕøತಿಕ ಸಂಸ್ಥೆಯ ನಿರ್ದೇಶಕಿ ಬೊಳ್ಳಜ್ಜೀರ ಸುಶೀಲ ಅಶೋಕ್ ಭಾಗವಹಿಸಲಿದ್ದಾರೆ.
ಕೊಡವ ಭಾಷೆಯಲ್ಲಿ ಹಾಡುಗಾರಿಕೆ,“ ಮಂಡೀರ ಜಯಾ ಅಪ್ಪಣ್ಣ ದತ್ತಿ ನಿಧಿ ಪ್ರಯುಕ್ತ ಕೊಡವ ಜಯಾ ಭಾರತ ಮಹಾಕಾವ್ಯ ಓದುವ ಸ್ಪರ್ಧೆ ಹಾಗೂ ಕೊಡವ ಭಾಷೆಯಲ್ಲಿ ಶಬ್ದ ಹೇಳುವ ಸ್ಪರ್ಧೆಗಳನ್ನು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಡೆಸಲಾಗುವದು. ವಿಜೇತರಿಗೆ ಪ್ರತಿ ವಿಭಾಗವಾರು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವದು. ಈ ಸಂದರ್ಭ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕøತಿ, ಸಂಶೋಧನೆ, ಜಾನಪದ ಹಾಗೂ ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಡಾ.ತೀತಿರ ರೇಖಾ ವಸಂತ್ಅವರನ್ನು ಸನ್ಮಾನಿಸಲಾಗುವದು. ರೇಖಾ ವಸಂತ್ ಅವರಿಂದ “ಕೊಡವ ಮಹಾ ಕಾವ್ಯ ಜಯಾ ಭಾರತ” ಎಂಬ ವಿಷಯ ಮಂಡನೆ ನಡೆಯಲಿದೆ.
ಕೂಟ ಇದುವರೆಗೆ ಬಿಡುಗಡೆಗೊಳಿಸಿದ ಪುಸ್ತಕಗಳು ಹಾಗೂ ಧ್ವನಿ ಸುರುಳಿಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಇರುತ್ತದೆ. ಹೆಚ್ಚಿನ ಮಾಹಿತಿಗೆ 9880584732, 9448326014 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಕೂಟದ ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ಚಂಗಪ್ಪ ತಿಳಿಸಿದ್ದಾರೆ.