ಆಲೂರು-ಸಿದ್ದಾಪುರ/ಒಡೆಯನಪುರ, ಡಿ. 28: ತುಳು ಭಾಷೆ ಮತ್ತು ಸಂಸ್ಕøತಿಯ ಅಭಿವೃದ್ಧಿಗೆ ವಿವಿಧ ಜನಾಂಗಗಳ ತುಳು ಭಾಷಿಗರು ಸಂಘಟಿತರಾಗಬೇಕು ಎಂದು ತುಳು ಜಾನಪದ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಸದಸ್ಯ ಎಸ್.ಎನ್. ರಘು ಅಭಿಪ್ರಾಯ ಪಟ್ಟರು.
ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಸಾರ್ವಜನಿಕ ಸಮುದಾಯ ಕೇಂದ್ರದಲ್ಲಿ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ದುಂಡಳ್ಳಿ, ನಿಡ್ತ, ಆಲೂರು-ಸಿದ್ದಾಪುರ, ಗೌಡಳ್ಳಿ ಪಂಚಾಯಿತಿಗಳ ವಲಯ ಮಟ್ಟದ ತುಳು ಭಾಷಿಗರ ಸಭೆಯಲ್ಲಿ ಮಾತನಾಡುತ್ತಿದ್ದರು. ತುಳು ಬಾಷೆಯ ಅಭಿವೃದ್ಧಿ ಹಾಗೂ ಕಲೆ-ಸಂಸ್ಕøತಿಯ ಪರಂಪರೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಜಾತಿ, ಜನಾಂಗಗಳ ತುಳು ಭಾಷಿಗರು ಸಂಘಟಿತರಾಗುವಂತೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಘಟಕದ ಅಧ್ಯಕ್ಷ ದಿನೇಶ್ ಕುಲಾಲ್ ಮಾತನಾಡಿ, ಪ್ರತಿಯೊಬ್ಬ ತುಳು ಭಾಷಿಗರು ತನ್ನ ಮಾತೃ ಭಾಷೆಗೆ ಹೆಚ್ಚಿನ ಒತ್ತುನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ಮನುಕುಮಾರ್ ರೈ, ಉಪಾಧ್ಯಕ್ಷ ದಾಮೋದರ್ ಮಾತನಾಡಿದರು. ಈ ಸಂದರ್ಭ ತಾಲೂಕು ಘಟಕದ ಉಪಾಧ್ಯಕ್ಷೆ ಇಂದಿರಾ, ವಿವಿಧ ಜನಾಂಗದ ತುಳು ಭಾಷೆ ಪ್ರಮುಖರಾದ ಎಸ್.ಎಂ. ರಂಜನ್, ರಮಾನಂದ್, ಈಶ್ವರಣ್ಣ, ಶೇಷಪ್ಪ, ಕುಮಾರ್, ಇ.ಎಸ್. ದಿನೇಶ್, ದೇವರಾಜ್, ವಿ.ಸಿ. ಸುರೇಶ್ ಒಡೆಯನಪುರ, ಶಶಿಕುಮಾರ್, ಗಣೇಶ್ ಶೆಟ್ಟಿ, ಮತ್ತಪ್ಪ, ಲಲಿತಾ ಶಾಂತಪ್ಪ, ಉಷಾ ಜಯೇಶ್ ಹಾಜರಿದ್ದರು.