ಮೂರ್ನಾಡು, ಡಿ. 28: ಕೊಡಗು ಜಿಲ್ಲಾ ಯುವ ಒಕ್ಕೂಟದ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಶುಂಠಿ ಮಂಗಳೂರು ಬಸವೇಶ್ವರ ಯುವಕ ಸಂಘದ ಎಂ.ಡಿ. ಹರೀಶ್ ಆಯ್ಕೆಗೊಂಡಿದ್ದಾರೆ.

ಮಡಿಕೇರಿ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ಸ್ಥಾಪಕಾಧ್ಯಕ್ಷ ಗಿರೀಶ್ ತಾಳತ್ತಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಹಾಕತ್ತೂರು ತ್ರಿನೇತ್ರ ಯುವಕ ಸಂಘದ ಪಿ.ಪಿ. ಸುಕುಮಾರ್ ಹಾಗೂ ಹುದಿಕೇರಿ ಕಾವೇರಿ ಯುವತಿ ಮಂಡಳಿ ಇಂದು ನಾಣಯ್ಯ, ಕಾರ್ಯದರ್ಶಿ ಆಗಿ ಮಡಿಕೇರಿ ನೆಲ್ಲಕ್ಕಿ ಯುವತಿ ಮಂಡಳಿಯ ಇಂದು ರವೀಂದ್ರ, ಸಹಕಾರ್ಯದರ್ಶಿ ಆಗಿ ಯಡೂರು ಉದಯ ಯುವಕ ಸಂಘದ ಯಡೂರು ರವಿ ಹಾಗೂ ಪೊನ್ನಂಪೇಟೆ ಜೈಭೀಮ್ ಯುವಕ ಸಂಘದ ಎಸ್.ಟಿ. ಗಿರೀಶ್, ಖಜಾಂಚಿ ಆಗಿ ಬಿಳುಗುಂದ ಕಾವೇರಿ ಯುವತಿ ಮಂಡಳಿಯ ರಾಣಿ ಅಪ್ಪಯ್ಯ ಆಯ್ಕೆಗೊಂಡಿದ್ದಾರೆ.

ಸಭೆಯಲ್ಲಿ ಸಲಹೆಗಾರರಾದ ಎಂ.ಕೆ. ವೆಂಕಟೇಶ್, ಕಂದಾ ದೇವಯ್ಯ, ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ ದೇರಳ, ಕೆ.ಎಂ. ಮೋಹನ್ ಉಪಸ್ಥಿತರಿದ್ದರು.