ಮಡಿಕೇರಿ, ಡಿ. 27: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಲ್ಲಿ ಜೋಡಣೆ ಸಂಪರ್ಕ ಹೊಂದಿರುವವರು 2017-18 ನೇ ಸಾಲಿನವರೆಗೆ ಹಿಂದಿನ ಸಾಲಿನ ಬಾಕಿ ಸೇರಿದಂತೆ ಚಾಲ್ತಿ ಸಾಲಿನ ನೀರಿನ ತೆರಿಗೆಯನ್ನು ನಗರಸಭೆ ಕಚೇರಿಯಲ್ಲಿ ಪಾವತಿಸಿ ಅಧಿಕೃತ ರಶೀದಿ ಪಡೆಯತಕ್ಕದ್ದು. ತಪ್ಪಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮವಹಿಸಲಾಗುವದು ಹಾಗೂ ನಗರಸಭೆ ವಾಣಿಜ್ಯ ಮಳಿಗೆ ಬಾಡಿಗೆ, ಆಸ್ತಿ, ತೆರಿಗೆ, ಉದ್ದಿಮೆ, ಪರವಾನಿಗೆ ನವೀಕರಣ ಫೀ, ಅನುಮತಿ ಪಡೆದು ಹಾಕಿರುವ ಜಾಹಿರಾತು ನವೀಕರಣ ಫೀಗಳನ್ನು ಜನವರಿ 15 ರೊಳಗೆ ಪಾವತಿಸಲು ನಗರಸಭೆ ಪೌರಾಯುಕ್ತೆ ಬಿ. ಶುಭಾ ಸೂಚಿಸಿದ್ದಾರೆ.