ಕುಶಾಲನಗರ, ಡಿ. 27: ಸನಾತನ ಧರ್ಮ ಹಾಗೂ ಭಗವದ್ಗೀತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಇಸ್ಕಾನ್ ಅಖಿಲ ಭಾರತ 34ನೇ ವರ್ಷದ ರಥಯಾತ್ರೆ ಕುಶಾಲನಗರಕ್ಕೆ ಆಗಮಿಸಿತು.
1984ರಲ್ಲಿ ಪ್ರಾರಂಭವಾದ ಈ ಯಾತ್ರೆ ನಿರಂತರವಾಗಿ ದೇಶಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದು, ಇದೀಗ 6ನೇ ಬಾರಿಗೆ ಕರ್ನಾಟಕ ವನ್ನು ಪ್ರವೇಶಿಸಿದೆ. ದೇವಾಲಯದ ಧರ್ಮಪ್ರಚಾರಕರು ಸಾರ್ವಜನಿಕರಿಗೆ ಭಗವದ್ಗೀತೆಯ ಮಹತ್ವ ಸಾರುವದರೊಂದಿಗೆ ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.