ಕುಶಾಲನಗರ, ಡಿ. 27: ನಿದ್ದೆಯ ಮಂಪರಿನಲ್ಲಿ ಕಾರು ಚಾಲಿಸುತ್ತಿದ್ದ ಯುವಕನೋರ್ವ ರಸ್ತೆಗೆ ಅಳವಡಿಸಲಾದ ಬ್ಯಾರಿಕೇಡಿಗೆ ಡಿಕ್ಕಿ ಹೊಡೆದು ಆಯತಪ್ಪಿದ ಕಾರು ಅಪಘಾತದಿಂದಾಗಿ ಕೋಲಾರ ಜಿಲ್ಲೆಯ ಜೋಳ ಘಟ್ಟದ ನಿವಾಸಿ ನಾಗರಾಜು ಎಂಬವರ ಮಗನಾದ ವಿನಯ್ ಕುಮಾರ್ (24) ಎಂಬಾತ ಸಾವನ್ನಪ್ಪಿರುವ ಘಟನೆ ನಗರದ ಬಿ ಎಂ ರಸ್ತೆಯಲ್ಲಿ ಬ್ಲೂಮೂನ್ ಕುಶಾಲನಗರ, ಡಿ. 27: ನಿದ್ದೆಯ ಮಂಪರಿನಲ್ಲಿ ಕಾರು ಚಾಲಿಸುತ್ತಿದ್ದ ಯುವಕನೋರ್ವ ರಸ್ತೆಗೆ ಅಳವಡಿಸಲಾದ ಬ್ಯಾರಿಕೇಡಿಗೆ ಡಿಕ್ಕಿ ಹೊಡೆದು ಆಯತಪ್ಪಿದ ಕಾರು ಅಪಘಾತದಿಂದಾಗಿ ಕೋಲಾರ ಜಿಲ್ಲೆಯ ಜೋಳ ಘಟ್ಟದ ನಿವಾಸಿ ನಾಗರಾಜು ಎಂಬವರ ಮಗನಾದ ವಿನಯ್ ಕುಮಾರ್ (24) ಎಂಬಾತ ಸಾವನ್ನಪ್ಪಿರುವ ಘಟನೆ ನಗರದ ಬಿ ಎಂ ರಸ್ತೆಯಲ್ಲಿ ಬ್ಲೂಮೂನ್ ಕಾರು ಚಾಲಿಸುತಿದ್ದ ವಿನಯ್ ಕುಮಾರ್ ಸುಮಾರು ನೂರು ಅಡಿಗಳಿಗೂ ಅಧಿಕ ದೂರ ಹಾರಿ ಎಸೆಯಲ್ಪಟ್ಟು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಾತ್ರಿಯೇ ಅಪಘಾತ ನಡೆದ ಸ್ಥಳಕ್ಕೆ ಕುಶಾಲನಗರ ವೃತ್ತ ನಿರೀಕ್ಷಕರಾದ ಕ್ಯಾತೇಗೌಡ. ಸಂಚಾರಿ ಠಾಣಾಧಿಕಾರಿ ಅಪ್ಪಾಜಿ ಸಿಬ್ಬಂದಿಗಳಾದ ಹೆಚ್.ಆರ್. ಶ್ರೀನಿವಾಸ್ ಇನ್ನಿತರರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕುಶಾಲನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು.
ಚಿತ್ರ: ಟಿ.ಜಿ. ಸತೀಶ್