* ನಾಪೆÇೀಕ್ಲು, ಡಿ. 26: ಫೀಲ್ಡ್ ಮಾರ್ಷಲ್, ಜನರಲ್ ಸೇರಿ ದಂತೆ ಹಿರಿಯ ಅಧಿಕಾರಿಗಳು ಮತ್ತು 40 ಸಾವಿರ ಸೈನಿಕರನ್ನು ನಮ್ಮ ದೇಶಕ್ಕೆ ನೀಡಿದ ಕೊಡಗು ಜಿಲ್ಲೆ ಭಾರತದ ಕಿರೀಟ ಎಂದು ಸೆಂಟ್ ಜೋಸೆಫ್ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪರದಂಡ ಸುನಿಲ್ ಸೋಮಯ್ಯ ಅಭಿಪ್ರಾಯಪಟ್ಟರು.
ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸೈನಿಕರೊಂದಿಗೆ ದೇಶದ ಕ್ರೀಡಾ ಕ್ಷೇತ್ರದಲ್ಲಿಯೂ ಜಿಲ್ಲೆಯ ಕೊಡುಗೆ ಅಪಾರವಾದುದು ಎಂದರು. ಸರಕಾರ ಕಳೆದ ಸಾಲಿನಲ್ಲಿ ವಿದ್ಯಾ ಕ್ಷೇತ್ರಕ್ಕೆ ರೂ. 18 ಸಾವಿರ ಕೋಟಿ ನೀಡಿದೆ. ಸರಕಾರಿ ಮತ್ತು ಅನುದಾನಿತ ಶಾಲಾ ಆಡಳಿತ ಮಂಡಳಿ ಅದನ್ನು ಸರಿಯಾಗಿ ಬೆಳೆಸಿಕೊಳ್ಳಬೇಕು ಎಂದರು.
ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ಕುಂಜಿಲ-ಕಕ್ಕಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ನೆರವೇರಿಸಿದರು. ಕ್ರೀಡೋತ್ಸವ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಅಂತರ ಗ್ರಾಮದ ಹಾಕಿ ಫೈನಲ್ ಪಂದ್ಯವನ್ನು ಕುಂಜಿಲ ಗ್ರಾಮದ ಕಾಫಿ ಬೆಳೆಗಾರ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಅಂತರ ಗ್ರಾಮ ಥ್ರೋಬಾಲ್ ಪಂದ್ಯವನ್ನು ಬಾಚಮಂಡ ಕಸ್ತೂರಿ ಪೂವಪ್ಪ, ಅಂತರ ಗ್ರಾಮ ವಾಲಿಬಾಲ್ ಪಂದ್ಯವನ್ನು ಅದಪೆÇಳೆ ಮಹಮ್ಮದ್ ಹಾಜಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಪಥ ಸಂಚಲನ, ಅಂಗಸಾಧನೆ, ಯೋಗಾಸನ, ಕರಾಟೆ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಕುಟ್ಟಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಪಯ್ಯಡಿ ಹಂಸ, ಕಕ್ಕಬೆ-ಕುಂಜಿಲ ಗ್ರಾ.ಪಂ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕಾರ್ಯದರ್ಶಿ ಕಲ್ಯಾಟಂಡ ಸುದಾ ಗಣಪತಿ, ನಿದೇರ್ಶಕರಾದ ಬಡಕಡ ದೀನಾ ಪೂವಯ್ಯ, ಕೋಟೆರ ನೈಲ್ ಚಂಗಪ್ಪ, ಮುಕ್ಕಾಟಿ ರಮೇಶ್, ಚೋಯಮಾಡಂಡ ನಾಣಯ್ಯ ಮತ್ತಿತರರು ಇದ್ದರು.
ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಚಂಡೀರ ಲೀಲಾವತಿ ಸ್ವಾಗತ, ಶಿಕ್ಷಕಿಯರಾದ ಅರೆಯಡ ಬಬಿತಾ ಜೀವನ್, ಸುಜಾತಾ ದೇವಯ್ಯ ನಿರೂಪಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನಿಲ್ ರಾಜ್ ಪ್ರೌಢಶಾಲಾ ವರದಿ ಮತ್ತು ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಲೀಲಾವತಿ ಪ್ರಾಥಮಿಕ ಶಾಲಾ ವರದಿ ವಾಚಿಸಿ, ನಿರ್ದೇಶಕಿ ಪರದಂಡ ಪ್ರಮಿಳಾ ಪೆಮ್ಮಯ್ಯ ವಂದಿಸಿದರು.