ಮಡಿಕೇರಿ, ಡಿ. 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್‍ನ ಆಶ್ರಯದಲ್ಲಿ ಇತ್ತೀಚಿಗೆ ಕೋಲಾರದ ಹೊಸಕೋಟೆಯಲ್ಲಿ ನಡೆದ 38ನೇ ಮಾಸ್ಟರ್ಸ್ ಅಥ್ಲೆಟಿಕ್ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ 10 ಸಾವಿರ ಮೀಟರ್ ಓಟದ ವಿಭಾಗದಲ್ಲಿ ಇಬ್ನಿವಳವಾಡಿ ಗ್ರಾಮದ ನಂದಿನೆರವಂಡ ಟಿಪ್ಪು ಬಿದ್ದಪ್ಪ ಅವರು ತೃತೀಯ ಸ್ಥಾನಗಳಿಸುವ ಮೂಲಕ ಕಂಚಿನ ಪದಕವನ್ನು ಪಡೆದಿದ್ದಾರೆ.