ಮಡಿಕೇರಿ, ಡಿ. 26: ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ ಹಾಗೂ ನಗರದ ಎಲ್ಲಾ ದಲಿತ ಮತ್ತು ಪ್ರಗತಿಪರ ಒಕ್ಕೂಟಗಳ ಸಹಯೋಗದಲ್ಲಿ ಕೋರೆಗಾಂವ್ ಯುದ್ಧದ 300ನೇ ವರ್ಷಾಚರಣೆಯನ್ನು ತಾ. 31 ರಂದು ನಗರದ ಕಾರ್ಯಪ್ಪ ವೃತ್ತದ ಬಳಿ ಇರುವ ಡಾ. ಅಂಬೇಡ್ಕರ್ ಭವನದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರಬುದ್ಧ ನೌಕರರ ಒಕ್ಕೂಟದ ಅಧ್ಯಕ್ಷ ಡಾ. ವಿ.ಎಸ್. ಸತೀಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಅಂದು ಬೆಳಿಗ್ಗೆ 8.30 ಗಂಟೆಗೆ ನಗರದ ಇಂದಿರಾಗಾಂಧಿ ವೃತ್ತದಿಂದ ಕಾರ್ಯಪ್ಪ ವೃತ್ತದವರೆಗೆ ಪಂಜಿನ ಮೆರವಣಿಗೆ ಹಾಗೂ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಂದು ರಾತ್ರಿ 12 ಗಂಟೆಗೆ ಡಾ. ಅಂಬೇಡ್ಕರ್ ಭವನದ ಎದುರು ಕೋರೆಗಾಂವ್ ಯುದ್ಧದಲ್ಲಿ ಹುತಾತ್ಮರಾದ 22 ವೀರಯೋಧರ ಗೌರವಾರ್ಥ 22 ದೀಪಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸ ಲಾಗುವದು ಎಂದು ಸತೀಶ್ ತಿಳಿಸಿದ್ದಾರೆ.