ಸಿದ್ದಾಪುರ, ಡಿ. 24: ಸಾಮೂಹಿಕ ಪೂಜೆಗಳಿಂದ ಆತ್ಮ ಸಂತೃಪ್ತಿ ಹೆಚ್ಚಾಗಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಚಂದ್ರಮೋಹನ್ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಕುಶಾಲನಗರ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕುಶಾಲನಗರ ವಲಯ ನೆಲ್ಯಹುದಿಕೇರಿ ಕಾರ್ಯಕ್ಷೇತ್ರ, ಗ್ರಾಮ ಪಂಚಾಯಿತಿ ನೆಲ್ಲಿಹುದಿಕೇರಿ ಹಾಗೂ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಮುತ್ತಪ್ಪ ದೇವಾಲಯ ಸಭಾಂಗಣದಲ್ಲಿ ಹಮ್ಮಿ ಕೊಂಡ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವರಲ್ಲಿ ಭಯ ಭಕ್ತಿ ಇದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ. ಸಾಮೂಹಿಕವಾದ ಪೂಜೆಗಳಿಂದ ಅದು ಸಾಧ್ಯ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸಾಮೂಹಿಕ ಸತ್ಯ ನಾರಾಯಣ ಪೂಜಾ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಶಾಂತ್ ವಹಿಸಿದ್ದರು. ಸಾಮೂಹಿಕ ಸತ್ಯ ನಾರಾಯಣ ಪೂಜೆಯನ್ನು ಬೆಟ್ಟದಕಾಡು ಶ್ರೀ ಸತ್ಯನಾರಾಯಣ ದೇವಾಲಯದ ಅರ್ಚಕ ಗಿರೀಶ್ ಭಟ್ ನೆರವೇರಿಸಿದರು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಕಾರ್ಪೊರೇಶನ್ ಬ್ಯಾಂಕ್ ವ್ಯವಸ್ಥಾಪಕ ಕೀರ್ತಿಪ್ರಸಾದ್, ಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ಡಿ ಚೀಯಣ್ಣ, ಜಿ.ಪಂ ಸದಸ್ಯೆ ಸುನಿತ, ಕಾಫಿ ಬೆಳೆಗಾರ ಎಚ್.ಎನ್ ಮಾದಪ್ಪ, ಹರೀಶ್, ದೇವಕಿ, ವಾರಿಜಾ ಭರತ್, ಪ್ರಮೀಳ ಮತ್ತು ಇತರರು ಇದ್ದರು.