ವೀರಾಜಪೇಟೆ, ಡಿ. 24: ಇಲ್ಲಿನ ಪಂಜರ್‍ಪೇಟೆಯ ಮಾರ್ಜಿನ್ ಫ್ರೀ ಅಂಗಡಿ ಪಕ್ಕದಲ್ಲಿರುವ ಹೈವೇ ಮಟನ್ ಸ್ಟಾಲ್‍ನ ಮೇಲೆ ಇಂದು ಬೆಳಿಗ್ಗೆ ನಗರ ಪೊಲೀಸರು ಧಾಳಿ ಮಾಡಿದಾಗ 15 ಕೆ.ಜಿ. ಅಕ್ರಮ ದನದ ಮಾಂಸ ಪತ್ತೆಯಾಗಿದೆ. ಪೊಲೀಸರು ದನದ ಮಾಂಸವನ್ನು ವಶ ಪಡಿಸಿಕೊಂಡು ಅಂಗಡಿಯಲ್ಲಿದ್ದ ಸಲೀಂ ಎಂಬಾತನನ್ನು ಬಂಧಿಸಿದ್ದಾರೆ.ದನದ ಮಾಂಸವನ್ನು ಹುಣಸೂರಿನಿಂದ ತರಿಸಲಾಗಿದ್ದು ಈ ಅಂಗಡಿಯಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ನೀಡಿದ ಸುಳಿವಿನ ಮೇರೆ ಇಂದು ಪೊಲೀಸರು ಅಂಗಡಿಯ ಮೇಲೆ ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.