ಮಡಿಕೇರಿ, ಡಿ. 24: ಕೊಡಗು ಈ ಹಿಂದೆ ಪ್ರಾಂತ್ಯವಾಗಿದ್ದ ಸಂದರ್ಭದಲ್ಲಿ 35 ನಾಡಿಗೆ 24 ಶಾಸಕರನ್ನು ಹೊಂದಿತ್ತು. ತದನಂತರ ಮೂರು ತಾಲೂಕಾಗಿ ಮೂವರು ಶಾಸಕರಿಗೆ ಸೀಮಿತವಾಗಿ ಇದೀಗ ಎರಡು ಕ್ಷೇತ್ರದೊಂದಿಗೆ ಎರಡು ಶಾಸಕ ಸ್ಥಾನಕ್ಕೆ ಇಳಿದಿದೆ.

ಇದರೊಂದಿಗೆ ರಾಜ್ಯದಲ್ಲಿ ಸ್ವಂತ ಸಂಸದರಿಲ್ಲದ ಜಿಲ್ಲೆ ಈಗಿನ ಕೊಡಗಾಗಿದೆ ಎಂದು ಪೂಮಾಲೆ ಪತ್ರಿಕೆ ಸಂಪಾದಕರಾಗಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ವಿಷಾದಿಸಿದರು. ಪೊನ್ನಂಪೇಟೆ ತಾಲೂಕು ಹೋರಾಟದ 52ನೇ ದಿನದ ಪ್ರತಿಭಟನೆಯಲ್ಲಿ ಗೋಣಿಕೊಪ್ಪಲು ಕೊಡವ ಸಮಾಜದ ಪರವಾಗಿ ಮಾತನಾಡಿದ ಅವರು, ಗುಡ್ಡಗಾಡು ಪ್ರದೇಶವಾಗಿರುವ ಇಲ್ಲಿ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆ ಈ ಹಿಂದೆ ಅಸ್ತಿತ್ವ ದಲ್ಲಿದ್ದ ಕಿಗ್ಗಟ್ಟ್‍ನಾಡು ತಾಲೂಕನ್ನು ಹೊಸದಾಗಿ ಪೊನ್ನಂಪೇಟೆ ತಾಲೂಕಾಗಿ ರಚಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.