ಮಡಿಕೇರಿ, ಡಿ. 24: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಚೆರಿಯಮನೆ ಕುಟುಂಬಸ್ಥರ ಸಹಯೋಗದೊಂದಿಗೆ ನಡೆಯಲಿದ್ದು, ಈ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು. ಯುವ ವೇದಿಕೆ ಹಾಗೂ ಚೆರಿಯಮನೆ ಕುಟುಂಬದ ಕ್ರಿಕೆಟ್ ಸಮಿತಿ ಜಂಟಿ ಸಭೆಯಲ್ಲಿ ಪಂದ್ಯಾವಳಿ ಆಯೋಜನೆ ಬಗ್ಗೆ ಚರ್ಚಿಸಲಾಯಿತು. ಪಂದ್ಯಾವಳಿ ಆಯೋಜನೆ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಇದೇ ಸಂದರ್ಭ ಚೆರಿಯಮನೆ ಕುಟುಂಬಸ್ಥರು ಪಂದ್ಯಾವಳಿಯ ಅಂಗವಾಗಿ ರಚಿಸಿರುವ ಲಾಂಚನವನ್ನು ಮುಂಬರುವ ಜ. 13 ರಂದು ಬಿಡುಗಡೆ ಗೊಳಿಸುವಂತೆ ತೀರ್ಮಾನಿಸಲಾಯಿತು. ದೇವರ ಕಾಡುವಿನ ಹಿನ್ನೆಲೆ ಇರುವ ಲಾಂಚನವನ್ನು ಗೌಡ ಸಮಾಜದ ಸಭಾಂಗಣದಲ್ಲಿ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷಣ್, ಸಲಹೆ ಗಾರರಾದ ಯಾಲದಾಳು ಹರೀಶ್, ನಿರ್ದೇಶಕರುಗಳು, ಚೆರಿಯಮನೆ ಕ್ರಿಕೆಟ್ ಸಮಿತಿ ಅಧ್ಯಕ್ಷ ಡಾ. ರಾಮ ಚಂದ್ರ, ಕಾರ್ಯದರ್ಶಿ ಚೆರಿಯಮನೆ ಪೆಮ್ಮಯ್ಯ, ಸೂರಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.