*ಗೋಣಿಕೊಪ್ಪಲು, ಡಿ. 24: ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ.

ನೊಕ್ಯ ಅಂಗನವಾಡಿ ಕೇಂದ್ರದ ಸರಸ್ವತಿ (36) ಎಂಬವೇ ಆತ್ಮಹತ್ಯೆ ಮಾಡಿಕೊಂಡಿರುವರಾಗಿದ್ದಾರೆ. ತಿತಿಮತಿಯಲ್ಲಿ ಬಾಡಿಗೆ ಮನೆಯಲ್ಲಿ ಪತಿ-ಪತ್ನಿ ವಾಸವಾಗಿದ್ದು, ಪತಿ ಟ್ಯಾಕ್ಸಿ ಚಾಲಕನಾಗಿದ್ದು, ಬೆಳಿಗ್ಗೆ ಮನೆಯಿಂದ ತೆರಳಿದ ನಂತರ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಧ್ಯಾಹ್ನ ಮೃತೆ ಸರಸ್ವತಿ ಅವರ ತಂದೆ-ತಾಯಿ ಮನೆಗೆ ಬಂದು ಬಾಗಿಲು ತಟ್ಟಿದ್ದು, ಕೆಲಸಮಯ ತೆರೆಯದೇ ಇದ್ದಾಗ ಪಕ್ಕದ ಬೇಕರಿಯವರು ಬಂದು ಕಿಟಕಿ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವದು ತಿಳಿದಿದೆ. ಮಕ್ಕಳಾಗದೇ ಇರುವದರಿಂದ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಡೈರಿಯಲ್ಲಿ ಬರೆದಿದ್ದಾರೆನ್ನಲಾಗಿದೆ.