ಶನಿವಾರಸಂತೆ, ಡಿ. 23: ಇಂದಿನ ಮಕ್ಕಳೇ ಭವಿಷ್ಯದ ಉತ್ತಮ ನಾಗರಿಕರಾಗಿ ರೂಪುಗೊಳ್ಳುವದರಿಂದ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ತೋರಬೇಕು ಎಂದು ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಅಭಿಪ್ರಾ ಯಪಟ್ಟರು.ಸಮೀಪದ ಹಂಡ್ಲಿ ಗ್ರಾಮದ ಅಂಗನವಾಡಿ ಕೇಂದ್ರ ದಲ್ಲಿ ನಡೆದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಆರೋಗ್ಯ ಸಹಾಯಕಿ ಸರಸ್ವತಿ ಮಾತನಾಡಿ, ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಪೌಷ್ಟಿಕ ಆಹಾರ ಅತಿಮುಖ್ಯ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲು ಗರ್ಭಿಣಿಯರ ವೈದ್ಯಕೀಯ ಪರೀಕ್ಷೆ, ಲಸಿಕೆ, ಕಬ್ಬಿಣಾಂಶದ ಮಾತ್ರೆ ನೀಡುವದು. ಕುಟುಂಬ ಯೋಜನೆ ಹಾಗೂ ಶಿಶುವಿಗೆ ತಪ್ಪದೆ ಲಸಿಕೆ ಹಾಕಿಸುವದರಿಂದ ತಾಯಿ - ಮಗುವಿನ ಆರೋಗ್ಯ ಹೆಚ್ಚಿಸಬಹುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರಾದ ಮೋಹನಾಕ್ಷಿ, ಕಾಮಾಕ್ಷಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.