ಮಡಿಕೇರಿ, ಡಿ. 22: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ಯುವಕ ಸಂಘದ ನೂತನ ಅಧ್ಯಕ್ಷರಾಗಿ ಉಜ್ವಲ್ ರಂಜಿತ್ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಸಂಪತ್‍ರಾಜ್, ಉಪಾಧ್ಯಕ್ಷರಾಗಿ ಕೇಶವ, ಚೇತನ್, ಸಹಕಾರ್ಯದರ್ಶಿಯಾಗಿ ಗಿರೀಶ್ ಗಡಿಗತ್ತಲ, ಸಂಘಟನಾ ಕಾರ್ಯದರ್ಶಿಗಳಾಗಿ ನಿಸಾರ್, ಸಂದೀಪ್ ರೈ, ಖಜಾಂಚಿಯಾಗಿ ಅಭಿಷೇಕ್ ಇವರುಗಳು ಆಯ್ಕೆಯಾಗಿದ್ದಾರೆ. ತಾ. 17 ರಂದು ಮಂಗಳಾದೇವಿ ನಗರದ ಸಮುದಾಯಭವನದಲ್ಲಿ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಹಿಂದಿನ ಅಧ್ಯಕ್ಷ ಹೆಚ್.ಜೆ. ರಾಚಯ್ಯ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು.