ವೀರಾಜಪೇಟೆ, ಡಿ. 22: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸೇವಾ ಸಮಿತಿಯ ಟ್ರಸ್ಟ್ ವತಿಯಿಂದ ತಾ. 26 ರಂದು ಅಪರಾಹ್ನ 3 ಗಂಟೆಗೆ ಮಂಡಲ ಪೂಜೆ ನಡೆಯಲಿದೆ. ಸಾಂಪ್ರದಾಯಿಕ ಪೂಜೆ, ಭಜನೆ, ದೇವರಿಗೆ ತುಪ್ಪದ ಅಭಿಷೇಕ ರಾತ್ರಿ 7.30 ಗಂಟೆಗೆ ಮಹಾ ಪೂಜಾ ಸೇವಾ ಜರುಗಲಿದೆ. ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.