ವೀರಾಜಪೇಟೆ, ಡಿ. 22: ಇತ್ತೀಚೆಗೆ ಕದನೂರು-ಬೋಯಿಕೇರಿ ಯಲ್ಲಿರುವ ಕದನೂರು-ಕೊಟ್ಟೋಳಿ ಕೊಡವ ಸಂಘದ 14ನೇ ವಾರ್ಷಿಕೋತ್ಸವ ವೀರಾಜಪೇಟೆಯ ಕೊಡವ ಸಮಾಜದ ತ್ರಿವೇಣಿ ಶಾಲೆಯ ಜಿಮ್ಮಿ ಕಲಾ ಸಭಾಂಗಣದಲ್ಲಿ ನಡೆಯಿತು.ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಮ್ಮಣಿಚಂಡ ಗಣೇಶ್, ಪಟ್ಟಡ ಸುರೇಶ್, ಬಲ್ಲಚಂಡ ರಾಜಾ ಸುಬ್ಬಯ್ಯ, ಅನ್ನೇರ್‍ಕಂಡ ಸೀತಾ ಬೆಳ್ಯಪ್ಪ ಹಾಗೂ ಕೋಣೇರಿರ ಅಕ್ಕಮ್ಮ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯರ ವಿಭಾಗದಲ್ಲಿ ಪ್ರತಿಭಾವಂತೆ ಕೋಣೇರಿರ ರೋಶನಿ ನಾಣಯ್ಯ, ಸಾಹಿತ್ಯ ಕ್ಷೇತ್ರದಲ್ಲಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಕ್ರೀಡಾಕ್ಷೇತ್ರದಲ್ಲಿ ಅಮ್ಮಣಿಚಂಡ ಸಂಜು ಸೋಮಯ್ಯ, ಪ್ರಗತಿಪರ ರೈತ ಕೋಣೇರಿರ ಸಂಪತ್ ಅಚ್ಚಯ್ಯ, ಚಿತ್ರ ಕಲಾವಿದರಾದ ಚೇನಂಡ ಶೋಭಾ ಅಪ್ಪಯ್ಯ, ಕಿರಿಯರ ವಿಭಾಗದಲ್ಲಿ ಎಸ್.ಎಸ್. ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಕೋಣೇರಿರ ಸುಚಿತಾ ಈಶ್ವರ್, ಅಪ್ಪಚೆಟ್ಟೋಳಂಡ ನಿಖಿಲ್, ಅಮ್ಮಣಿಚಂಡ ಬೆವನ್ ಬೋಪಣ್ಣ ಪಿ.ಯು.ಸಿ.ಯಲ್ಲಿ ಕೋಣೇರಿರ ಮುತ್ತಣ್ಣ, ಎಂ.ಟೆಕ್‍ನಲ್ಲಿ ಅಮ್ಮಣಿಚಂಡ ದಕ್ಷಾ ಉತ್ತಪ್ಪ, ಕ್ರೀಡಾ ಕ್ಷೇತ್ರದಲ್ಲಿ ಕುಂಬೆರ ಅದ್ವೈತ್ ನಾಚಪ್ಪ, ಕೊಟ್ಟಂಗಡ ನಿತ್ಯ ಗಣಪತಿ, ಅಮ್ಮಣಿಚಂಡ ಸ್ನೇಹ ಕುಶಾಲಪ್ಪ ಹಾಗೂ ಕರಾಟೆಯಲ್ಲಿ ಸಾಧನೆ ಮಾಡಿದ ಮಾಳೇಟಿರ ಕಿಲನ್ ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಕವಿತಾ ಸುಬ್ರಮಣಿ ಮತ್ತು ದಕ್ಷಾ ಉತ್ತಪ್ಪ ಇವರ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ನೃತ್ಯಗಳು, ಪುಟಾಣಿಗಳಾದ ನಾಯಕಂಡ ರಿಕ್ಕಿ ಕಾರ್ಯಪ್ಪ ಮತ್ತು ರೋಹನ್ ಚಿಣ್ಣಪ್ಪ ಇವರ ಕೀ ಬೋರ್ಡ್ ಪ್ಲೇ, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಮತ್ತು ಕೊಟ್ಟಂಗಡ ರಾಧ ಗಣಪತಿ ಅವರ ಧ್ವನಿಯಲ್ಲಿ ಮೂಡಿಬಂದ ಹಾಡುಗಳು ಮತ್ತು ಅಮ್ಮಣಿಚಂಡ ಚಿಂತನಾ ಚೇತನ್ ಇವರ ಚಿತ್ರಕಥೆ ನಿರ್ದೇಶನದಲ್ಲಿ ಪ್ರದರ್ಶನಗೊಂಡ “ನೆಲ್ಲಕ್ಕಿ ಬೊಳ್‍ಚ”ನಾಟಕ ನೆರೆದಿದ್ದವರನ್ನು ರಂಜಿಸಿದವು.
ಕುಂಬೆರ ಯಶೋದ ಅಯ್ಯಪ್ಪ ಹಿಂದಿನ ಮಹಾಸಭೆ ವರದಿ ವಾಚಿಸಿದರು. ಅಮ್ಮಣಿಚಂಡ ರೂಪ ಕುಶಾಲಪ್ಪ ಮತ್ತು ಮಂಗಳಾ ಪ್ರವೀಣ್ ಪ್ರಾರ್ಥಿಸಿದರು.
ಅಮ್ಮಣಿಚಂಡ ಗಂಗಮ್ಮ ಸ್ವಾಗತಿಸಿದರು. ಮುಂಡಿಯೋಳಂಡ ಶಾರದಾ ಸುರೇಶ್ ವಂದಿಸಿದರೆ, ಅಮ್ಮಣಿಚಂಡ ದರ್ಶನ್ ಅಪ್ಪಚ್ಚು ನಿರೂಪಿಸಿದರು. ಅಮ್ಮಣಿಚಂಡ ಚೇತನ್ ಹಾಗೂ ದರ್ಶನ್ ತಾಂತ್ರಿಕ ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರುಗಳಾದ ಅನ್ನೇರ್ ಕಂಡ ಶರಿ ಸೋಮಣ್ಣ, ಅಮ್ಮಣಿಚಂಡ ಪ್ರವೀಣ್ ಅಯ್ಯಪ್ಪ, ಕೋಣೇರಿರ ಡಾನ್ ಪೂವಯ್ಯ, ಪಳಂಗಂಡ ರಮೇಶ್, ಬೊಳಕಾರಂಡ ರಂಜಿ ಸುಬ್ರಮಣಿ, ನಡಿಕೇರಿಯಂಡ ನಂದಾ, ಅಮ್ಮಣಿಚಂಡ ಸೌಮ್ಯ ನವೀನ್ ಮತ್ತು ಕೋಣೇರಿರ ಕವಿತಾ ಸಂಪತ್ ಹಾಜರಿದ್ದರು.