ಕರಿಕೆ, ಡಿ. 22: ಇಲ್ಲಿಗೆ ಸಮೀಪದ ಪಾಣತ್ತೂರು ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಹಸಿರು ಹೊರೆ ಕಾಣಿಕೆಯನ್ನು ಎಳ್ಳುಕೊಚ್ಚಿ ಅಯ್ಯಪ್ಪ ದೇವಾಲಯದಿಂದ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ನೂರಕ್ಕೂ ಅಧಿಕ ಮಹಿಳೆಯರು ಚಂಡೆ ಮೇಳದೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಚಂದ್ರ ನಾಯರ್ ಅವರ ನೇತೃತ್ವದಲ್ಲಿ ಆರು ಕಿ.ಮೀ.ದೂರಕ್ಕೆ ಅಡಿಕೆ, ತೆಂಗಿನಕಾಯಿ, ಅಕ್ಕಿ, ಬಾಳೆಗೊನೆ ಸೇರಿದಂತೆ ದವಸ ಧಾನ್ಯಗಳನ್ನು ಬುಟ್ಟಿಯಲ್ಲಿ ಸಿಂಗರಿಸಿ ತಲೆಮೇಲೆ ಹೊತ್ತ ಮೆರವಣಿಗೆ ಯನ್ನು ಗ್ರಾಮಸ್ಥರು ದಾರಿಯುದ್ದಕ್ಕೂ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.