ನಾಪೋಕ್ಲು, ಡಿ. 21: ಮಕ್ಕಿಶಾಸ್ತಾವು ದೇವಾಲಯ ರಸ್ತೆಯನ್ನು ಮಕ್ಕಿ ಶಾಸ್ತಾವು ದೇವರ ಉತ್ಸವದಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಉದ್ಘಾಟಿಸಿದರು.ಈ ಸಂದರ್ಭ ಗ್ರಾಮಸ್ಥ, ನಿವೃತ್ತ ಸೈನಿಕ ಕೊಂಡೀರ ಗಣೇಶ್ ಮಾತನಾಡಿ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಗಳಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಪ್ರಯತ್ನದಿಂದ ದೇವಾಲಯಕ್ಕೆ ಉತ್ತಮ ರಸ್ತೆ ನಿರ್ಮಾಣವಾಗಿದೆ ಎಂದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಸದಸ್ಯರಾದ ಮಾಚೆಟ್ಟೀರ ಕುಶು ಕುಶಾಲಪ್ಪ, ಸದಸ್ಯರಾದ ರೋಶನ್ ಮಹಮದ್, ಮಕ್ಕಿಶಾಸ್ತಾವು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ಯಾಮ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.