ಸಿದ್ದಾಪುರ, ಡಿ. 21: ಕಳೆದ ಸುಮಾರು 20 ವರ್ಷಗಳಿಂದ ಹದಗೆಟ್ಟಿರುವ ಇಂಜಿಲಗೆರೆಯ ಗೌರಿಯಲ್ಲಿರುವ ಶ್ರೀ ನಾರಾಯಣ ಗುರುಗಳ ಸಮುದಾಯ ಭವನದ ಸಮೀಪದ ರಸ್ತೆಯನ್ನು ದುರಸ್ತಿ ಪಡಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಅವರ ಬಳಿ ಮನವಿ ಮಾಡಿಕೊಂಡ ಮೇರೆಗೆ ಹರೀಶ್ ಬೋಪಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇಂಜಿಲಗೆರೆ ಗ್ರಾಮಾಸ್ಥರು ಗ್ರಾಮದ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಕೊಡುವಂತೆ ಪಟ್ಟಿ ತಯಾರಿಸಿ ಹರೀಶ್ ಬೋಪಣ್ಣ ಅವರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭ ವಲಯ ಕಾಂಗ್ರೆಸ್ ಅಧ್ಯಕ್ಷ ಶಾಜಿ, ಕಾಂಗ್ರೆಸ್ ಮುಖಂಡರುಗಳಾದ ನೌಷದ್, ಉಮ್ಮರ್, ಹಾಗೂ ನಾರಾಯಣ ಗುರು ಸಮಿತಿ ಪದಾಧಿಕಾರಿಗಳಾದ ರೀಶಾ, ಸಿಂಧು ಹಾಗೂ ಗ್ರಾಮಸ್ಥರು ಹಾಜರಿದ್ದರು.