ಮಡಿಕೇರಿ, ಡಿ. 21: ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಹಂತದಲ್ಲಿಯೇ ಸಾಮಾಜಿಕ ಹೊಣೆಗಾರಿಕೆಯೂ ಮುಖ್ಯವಾಗಿದ್ದು, ಇಂಥ ಜವಬ್ದಾರಿ ಯನ್ನು ರೋಟರ್ಯಾಕ್ಟ್ ಮೂಲಕ ವಿದ್ಯಾರ್ಥಿಗಳು ತಿಳಿಯಬಹುದಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ, ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ ಹೇಳಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಪ್ರಾಯೋಜಿತ ರೋಟರ್ಯಾಕ್ಟ್ ಕ್ಲಬ್ ನ ನೂತನ ಆಡಳಿತ ಮಂಡಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, ರೋಟರ್ಯಾಕ್ಟ್ ನಂಥ ವಿದ್ಯಾರ್ಥಿ ಸಂಘಟನೆಗಳಲ್ಲಿ ವಿದ್ಯಾರ್ಥಿಗಳ ಚಿಂತನಾಶಕ್ತಿಯ ಬಳಕೆಗೆ ರೋಟರಿಯಂಥ ಅಂತರರಾಷ್ಟ್ರೀಯ ಸಾಮಾಜಿಕ ಸಂಘಟನೆಯಲ್ಲಿ ವಿಪುಲವಾದ ಅವಕಾಶಗಳಿವೆ. ರೋಟರ್ಯಾಕ್ಟ್ ಯುವ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತಾ, ಸಾಮಾಜಿಕ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ನೀಡುತ್ತಿದೆ ಎಂದರಲ್ಲದೇ, ವಿಶ್ವದ ಅದೆಷ್ಟೋ ದೇಶಗಳಲ್ಲಿ ಅಲ್ಲಿನ ಯುವಪೀಳಿಗೆಗೆ ಸೂಕ್ತ ಶಿಕ್ಷಣ, ವಸತಿ, ಆಹಾರದ ಕೊರತೆಯಿದೆ. ಆದರೆ ಇತರ ಅಭಿವೃದ್ಧಿಯಲ್ಲಿನ ದೇಶಗಳಿಗೆ ಹೋಲಿಸಿದರೆ ಭಾರತ ದೇಶದ ಯುವಪೀಳಿಗೆಗೆ ಅಂಥ ದುಸ್ಥಿತಿಯಿಲ್ಲ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ರೋಟರ್ಯಾಕ್ಟ್ ಸದಸ್ಯರು ಸಮುದಾಯದಲ್ಲಿ ಪರಿವತ9ನೆ ತರುವ ನಿಟ್ಟಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಎಂದು ಸಲಹೆ ನೀಡಿದರಲ್ಲದೇ, ಪ್ರತಿಯೋವ9ರ ಜೀವನವನ್ನು ಹಸನಾಗಿಸುವಲ್ಲಿ ಕಾರ್ಯಪ್ರವೃತ್ತವಾಗಿರುವ ರೋಟರಿಯ ವಿದ್ಯಾರ್ಥಿ ಸಂಘಟನೆ ರೋಟರ್ಯಾಕ್ಟ್ ವಿದ್ಯಾರ್ಥಿಗಳನ್ನು ಸ್ನೇಹಜೀವಿಗಳಾಗಲು ಪ್ರೇರಿಪಿಸುತ್ತದೆ ಎಂದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಮಾತನಾಡಿ, ವಿಶ್ವದಾದ್ಯಂತ 9.522 ರೋಟರ್ಯಾಕ್ಟ್ ಕ್ಲಬ್ ಗಳ ಮೂಲಕ 2.91 ಲಕ್ಷ ಸದಸ್ಯರಿದ್ದಾರೆ. ರೋಟರಿ ಮತ್ತು ರೋಟರ್ಯಾಕ್ಟ್ ಕ್ಲಬ್ ಗಳು ಜಂಟಿ ಯೋಜನೆಯಡಿ ಲಕ್ಷಾಂತರ ಕಾರ್ಯಕ್ರಮಗಳನ್ನು ವಿಶ್ವವ್ಯಾಪಿ ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ. ಶಿಸ್ತುಬದ್ದ ಕಾರ್ಯ ನಿರ್ವಹಣೆಯ ಜೀವನಶೈಲಿ ವಿದ್ಯಾರ್ಥಿಗಳಲ್ಲಿ ಮೂಡಲು ರೋಟರ್ಯಾಕ್ಟ್ ನೆರವಾಗುತ್ತದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಮುಂದಿನ ದಿನಗಳಲ್ಲಿ ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್ ಆಯೋಜಿಸುವ ಕಾರ್ಯಕ್ರಮಗಳಿಗೆ ಮಿಸ್ಟಿ ಹಿಲ್ಸ್ ಎಲ್ಲಾ ರೀತಿಯ ಸಹಯೋಗ ನೀಡಲಿದೆ ಎಂದು ಭರವಸೆ ನೀಡಿದರು.

ರೋಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ನಮೃತಾ ಪಿ.ವರ್ಣೇಕರ್ ಮಾತನಾಡಿ, ನಾಯಕತ್ವ ಗುಣಗಳನ್ನು ರೂಪಿಸುವ ರೋಟರ್ಯಾಕ್ಟ್ ನಂಥ ಸಂಘಟನೆಯ ಸಾರಥ್ಯ ವಹಿಸಿರುವುದು ಹೆಮ್ಮೆ ಮೂಡಿಸಿದೆ ಎಂದರು.

ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್ ಸಮಿತಿ ಅಧ್ಯಕ್ಷ ಡಾ.ಶ್ರೀಧರ ಹೆಗ್ಗಡೆ, ಮಿಸ್ಟಿ ಹಿಲ್ಸ್ ರೋಟರ್ಯಾಕ್ಟ್ ಸಮಿತಿ ಅಧ್ಯಕ್ಷ ಎಂ.ಧನಂಜಯ್, ಮುಂದಿನ ಸಾಲಿನ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ರೋಟರ್ಯಾಕ್ಟ್ ಕ್ಲಬ್ ನ ನೂತನ ಕಾರ್ಯದರ್ಶಿ ಕೆ.ಎಸ್. ರಚನಾ, ನಿರ್ಗಮಿತ ಕಾರ್ಯದರ್ಶಿ ಮದನ್ ಗೋಪಾಲ್ ಮಾತನಾಡಿದರು. ರೋಟರ್ಯಾಕ್ಟ್‍ನ ಉಪಾಧ್ಯಕ್ಷೆ ಲಿಪಿಶ್ರೀ ಡಿ.ಜೆ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸಲೀಖಾ ಜೋಹ್ರಾ, ಸಾರ್ಜೆಂಟ್ ಎಟ್ ಆಮ್ರ್ಸ್ ಆಗಿ ಕೆ.ಎ.ಅಲೆನ್, ಖಚಾಂಚಿಯಾಗಿ ಪಿ.ಸಿ.ಜಿಷ್ಮಾ, ಪದಾಧಿಕಾರಿಗಳಾಗಿ ಕರಣ್ ಕಾರ್ಯಪ್ಪ, ತಫ್ರಿನಾ ಎಂ.ಎ , ಜಾನ್ಸನ್ , ಎಂ.ಜೆಡ್.ಅಬ್ರಾಜ್ ಮತ್ತು ತಂಡ ಅಧಿಕಾರ ಸ್ವೀಕರಿಸಿತು. ರೋಟರಿ ಮಿಸ್ಟಿ ಹಿಲ್ಸ್ ಪದಾಧಿಕಾರಿಗಳು, ಕಾರ್ಯಪ್ಪ ಕಾಲೇಜಿನ ಶಿಕ್ಷಕ, ವಿದ್ಯಾರ್ಥಿ ವೃಂದದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.