ನಾಪೋಕ್ಲು, ಡಿ. 21: ಕಾಸರಗೋಡಿನ ಚೂರಿ ಜುಮ್ಮಾಮಸೀದಿಯಲ್ಲಿ ಉಸ್ತಾದಾಗಿ ಕಾರ್ಯನಿರ್ವಹಿಸುತ್ತಿದ್ದ ನಾಪೋಕ್ಲು ಸಮೀಪದ ಹೊದವಾಡ ಗ್ರಾಮದ ರಿಯಾದ್ ಮುಸ್ಲಿಯಾರ್ ಅವರ ಹತ್ಯೆಯ ಹಿನ್ನೆಲೆಯಲ್ಲಿ ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್‍ನ ಕಾಸರಗೋಡು ಜಿಲ್ಲಾ ಸಮಿತಿವತಿಯಿಂದ 37ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಹೊದವಾಡದಲ್ಲಿ ನಿರ್ಮಿಸಿದ “ಕಾರುಣ್ಯ ಭವನದ” ಉದ್ಘಾಟನೆಯನ್ನು ತಾ. 21ರಂದು ನೆರವೇರಿಸಲಾಯಿತು.

ಮನೆಯ ಕೀಯನ್ನು ರಿಯಾದ್ ಮುಸ್ಲಿಯಾರ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಹೊದವಾಡ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಸೈಯದ್ ಮುನವರೇಲಿ ಶಿಯಾಬ್ ತಂಞಳ್ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಶಾಸಕರಾದ ಪಿ.ಬಿ. ಅಬ್ದುಲ್ ರಜಾಕ್, ಎನ್.ಎ. ನೆಲ್ಲಿಕುಂಞÂ , ಚರ್ಕಳ ಅಬ್ದುಲ್, ಮಾಜಿ ಮಂತ್ರಿಗಳಾದ ಸಿ.ಟಿ. ಅಹಮದ್, ಕೊಡಗು ಜಿಲ್ಲಾ ಖಾಜಿ ಮಹಮದ್ ಮುಸ್ಲಿಯಾರ್, ಇಸ್ಮಾಯಿಲ್ ಮುಸ್ಲಿಯಾರ್ ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಹುಸೇನ್ ಸಖಾಫಿ ಎಮ್ಮೆಮಾಡು, ಸಾದಿಲಿ ಪೈಜಿ, ಕೆ.ಎ. ಹ್ಯಾರಿಸ್, ಹಂಸ ಕೊಟ್ಟಮುಡಿ ಕೆ.ಎ. ಯುಸೂಫ್, ಕೆ.ಎಸ್.ಅಮುಹಾಜಿ, ಎಂ.ಎ. ಮನ್ಸೂರ್ ಆಲಿ ಸೇರಿದಂತೆ ಇತರ ಗಣ್ಯರು ಹಾಜರಿದ್ದರು. -ದುಗ್ಗಳ