ಕುಶಾಲನಗರ, ಡಿ. 21: ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಅವರಿಗೆ ಹುಣಸೂರು ನಗರ ಠಾಣೆಗೆ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಮೈಸೂರು ಜಿಲ್ಲೆಯ ಬಿಳಿಕೆರೆ ಠಾಣಾಧಿಕಾರಿ ನವೀನ್‍ಗೌಡ ಅವರನ್ನು ಸರಕಾರ ನಿಯೋಜಿಸಿ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳಿಂದ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸಿದ ಮಹೇಶ್ ಹಲವು ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಮಡಿಕೇರಿ ನಗರ ಠಾಣೆಗೆ ಹುಣಸೂರಿನಲ್ಲಿ ಠಾಣಾಧಿಕಾರಿಯಾಗಿದ್ದ ಷಣ್ಮುಗಂ ಅವರನ್ನು ನಿಯೋಜಿಸಲಾಗಿದೆ.