ಸೋಮವಾರಪೇಟೆ, ಡಿ. 19: ಬೆಂಗಳೂರಿನ ಸಿಂಬಾಸೀಸ್ ಇನ್ಸ್‍ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮೆರಥಾನ್ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಎಂ. ಆಶಿತ್ ಪ್ರಥಮ ಸ್ಥಾನ ಗಳಿಸಿದ್ದಾನೆ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈತ 33 ನಿಮಿಷದಲ್ಲಿ 10 ಕಿ.ಮೀ. ಮೆರಥಾನ್ ಪೂರೈಸಿ ಪ್ರಥಮ ಸ್ಥಾನ ಪಡೆದಿದ್ದಾನೆ. ಸಂಸ್ಥೆಯ ವತಿಯಿಂದ ಪಾರಿತೋಷಕ, ಬೈಸಿಕಲ್ ಮತ್ತು ರೂ. 40 ಸಾವಿರ ನಗದು ಪುರಸ್ಕಾರಕ್ಕೆ ಭಾಜನನಾಗಿದ್ದಾನೆ. ರೋಟರಿ ಸಂಸ್ಥೆಯ ಅಧ್ಯಕ್ಷ ರೋಹನ್ ಭಂಡಾರಿ, ನಿರ್ದೇಶಕರುಗಳಾದ ವಿದ್ಯಾಸಾಗರ್, ರಾಜೇಶ್ ಪಂಡ ಅವರುಗಳು ಬಹುಮಾನ ವಿತರಿಸಿದರು.

ಪ್ರಸ್ತುತ ಬೆಂಗಳೂರಿನ ಡಿವೈಇಎಸ್ ಕ್ರೀಡಾ ವಸತಿ ನಿಲಯದಲ್ಲಿರುವ ಆಶಿತ್, ಅಲಮೀನ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಮಡಿಕೇರಿ ರಸ್ತೆಯ ಮಹೇಶ್ ಮತ್ತು ರೂಪಾ ದಂಪತಿ ಪುತ್ರ.