ಸಿದ್ದಾಪುರ, ಡಿ.19: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಉಪಾಧ್ಯಕ್ಷರಾಗಿ ಕೆ.ಬಿ ಸತೀಶ್ ಆಯ್ಕೆಯಾಗಿದ್ದಾರೆ.2009 ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ಬಿಸಿಎಂಎ ಯಿಂದ ಸ್ಪರ್ಧಿಸಿ ಜಯಗಳಿಸಿದ್ದ ಹೆಚ್.ಎಂ ಕಮಲಮ್ಮ ಬಳಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ನಂತರ 2015 ರಲ್ಲಿ ಪರಿಶಿಷ್ಟ ಪಂಗಡದಿಂದ ಸ್ಪರ್ಧಿಸಿ ಜೇನುಕುರುಬರ ಮುತ್ತಮ್ಮ ವಿರುದ್ಧ ಜಯಗಳಿಸಿದ್ದರು. ಬಳಿಕ ಗ್ರಾ.ಪಂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಹಿಂದೆ ಬಿಸಿಎಂಎಯಿಂದ ಸ್ಪರ್ಧಿಸಿದ್ದ ಕಮಲಮ್ಮ ಈ ಬಾರಿ ಪರಿಶಿಷ್ಟ ಪಂಗಡದಿಂದ ಸ್ಪಧಿರ್üಸಿರುವದಾಗಿ ಮುತ್ತಮ್ಮ ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯವು ಉಪಾಧ್ಯಕ್ಷ ಚುನಾವಣೆಗೆ ತಡೆಯಾಜ್ಞೆ ವಿಧಿಸಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಕೊಡಗು ಜಿಲ್ಲೆಯ ಹಾಲುಮತ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವದರಿಂದ ಕಮಲಮ್ಮ ಪರವಾಗಿ ತೀರ್ಪು ಬಂತು.

ಇದರಿಂದಾಗಿ ಎರಡೂವರೆ ವರ್ಷಗಳ ನಂತರ ಪರಿಶಿಷ್ಟ ಜಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಒಟ್ಟು 11 ಮಂದಿ ಗ್ರಾ.ಪಂ ಸದಸ್ಯರಿರುವ ಗ್ರಾ.ಪಂ ಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಮಲಮ್ಮ ಹಾಗೂ ಸತೀಶ್ ಸ್ಪರ್ಧಿಸಿದರು. ಗ್ರಾ.ಪಂ ಸಭಾಂಗಣದಲ್ಲಿ ನಡೆದ ಗುಪ್ತ ಮತದಾನದಲ್ಲಿ ಕಮಲಮ್ಮ 5 ಮತಗಳು ಪಡೆದರೆ ಬಿಜೆಪಿ ಬೆಂಬಲಿತ ಸತೀಶ 6 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ, ಕವಿತಾ, ನಳಿನಿ ಮತ್ತು ಯಶೋಧ ಅಭಿನಂದಿಸಿದರು. ಸೋಮವಾರಪೇಟೆ ತಹಶೀಲ್ದಾರ್ ಮಹೇಶ, ಪಿಡಿಓ ನಂಜುಂಡ ಸ್ವಾಮಿ, ಸಿದ್ದಾಪುರ ಪಿಎಸ್‍ಐ ಸುಬ್ರಮಣ್ಯ ಮತ್ತು ಗ್ರಾ.ಪಂ ಸದಸ್ಯರು ಇದ್ದರು.