ಮಡಿಕೇರಿ, ಡಿ. 20: ಕೊಡಗು ಜಿಲ್ಲಾ ರಿಯಲ್ ಎಸ್ಟೇಟ್ ಬಿಸ್‍ನೆಸ್‍ಮನ್ ಅಸೋಸಿಯೇಷನ್, ಮಡಿಕೇರಿ ಇದರ 2016-17ನೇ ಸಾಲಿನ ಮಹಾಸಭೆಯು ತಾ. 22ರಂದು (ನಾಳೆ) ಪೂರ್ವಾಹ್ನ 10ಕ್ಕೆ ಮಡಿಕೇರಿಯ ಹೊಟೇಲ್ ವ್ಯಾಲಿವ್ಯೂನಲ್ಲಿ ಅಧ್ಯಕ್ಷ ತೋಲಂಡ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಗುವದು ಎಂದು ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ ತಿಳಿಸಿದ್ದಾರೆ.