ಮಡಿಕೇರಿ, ಡಿ. 10: ಮಹಿಳಾ ಸಂಘ ಸಂಸ್ಥೆಗಳ ಮೂಲಕ ತಮ್ಮ ದುಡಿಮೆಯ ಹಣವನ್ನು ಉಳಿತಾಯ ಮಾಡಿ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಮಹಿಳೆಯರು ಇಂದು ಅಭಿವೃದ್ಧಿ ಪಥದÀಲ್ಲಿ ಸಾಗುತ್ತಿದ್ದಾರೆ. ಇದೇ ರೀತಿಯಾಗಿ ಕಾಟಕೇರಿಯ ಕೂರನಬಾಣೆಯಲ್ಲಿ 20 ಸದಸ್ಯರನ್ನು ಹೊಂದಿರುವ ಶ್ರೀ ಲಕ್ಷ್ಮಿ ಸ್ತ್ರೀಶಕ್ತಿ ಸಂಘ ಮಹಿಳಾ ಸದಸ್ಯರಿಗೆ ದಾರಿದೀಪವಾಗಿದೆ.

ಸಂಘ 17 ವರ್ಷಗಳನ್ನು ಪೂರೈಸಿರುವ ಹಿನ್ನೆಲೆ ಮಹಿಳಾ ಸದಸ್ಯರು ಪ್ರವಾಸ ಕಾರ್ಯಕ್ರಮದಡಿ ಪುಣ್ಯಕ್ಷೇತ್ರಗಳಾದ ಒಡಿಯೂರು, ಶ್ರೀ ಮಂಗಳಾದೇವಿ, ಶ್ರೀ ಗೋಕರ್ಣನಾಥ, ಕದ್ರಿ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸ ಹಮ್ಮಿಕೊಂಡಿದ್ದರು.