ಗೋಣಿಕೊಪ್ಪಲು, ಡಿ. 10: ನಗರದ ಬಸ್ ನಿಲ್ದಾಣದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಇತ್ತೀಚೆಗೆ ಹುಣಸೂರುವಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಕೋಮು ಸಾಮರಸ್ಯ ಕದಡಿ ರಾಜಕೀಯ ಲಾಭ ಪಡೆಯುವ ಮೂಲಕ ಕೇವಲ ತಾನು ಹಿಂದೂ ಪ್ರತಿನಿಧಿಯಂತೆ ವರ್ತಿಸಿ ಸಾಂವಿಧಾನಿಕ ಜವಾಬ್ದಾರಿಯನ್ನು ಮರೆತಿರುವದಾಗಿ ಆರೋಪಿಸಿದ ಪ್ರತಿಭಟನಾಕಾರರು ಸಂಸದ ಪ್ರತಾಪ್ ಸಿಂಹರ ಸದಸ್ಯತ್ವ ರದ್ದು ಮಾಡುವಂತೆ ಆಗ್ರಹಿಸಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ನ ಅಧ್ಯಕ್ಷ ಜಮ್ಮಡ ಸೋಮಣ್ಣ ನೇತೃತ್ವದಲ್ಲಿ ಜಿಲ್ಲೆಯ ಯುವ ಕಾಂಗ್ರೆಸ್ನ ಯುವಕರು ಪಾಲ್ಗೊಂಡು ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಾದ ಸಂಸದ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಅವರ ಸೂಚನೆಯಂತೆ ಶಾಂತವಾಗಿದ್ದ ಹುಣಸೂರುವಿನಲ್ಲಿ ಕೋಮು ಸೌಹರ್ಧತೆಯನ್ನು ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಕೂಗಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಕ್ಕಾಟೀರ ಶಿವು ಮಾದಪ್ಪ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಾದ ಸಂಸದ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಅವರ ಸೂಚನೆಯಂತೆ ಶಾಂತವಾಗಿದ್ದ ಹುಣಸೂರುವಿನಲ್ಲಿ ಕೋಮು ಸೌಹರ್ಧತೆಯನ್ನು ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ರಶೀದ್, ಹತ್ತೂರು ವಲಯಾಧ್ಯಕ್ಷ ಅಬಿದ್, ವೀರಾಜಪೇಟೆ ವಲಯಾಧ್ಯಕ್ಷ ಚೆರೀನ್, ರಾಹುಲ್ ಗಾಂಧಿ ಬ್ರಿಗೇಡ್ ಕಾರ್ಯದರ್ಶಿ ಹನೀಫ್, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ ಅಚ್ಚುತ್ತನ್, ತಾ.ಪಂ. ಸದಸ್ಯ ಪಲ್ಷಿನ್ ಪೂಣಚ್ಚ, ಅಮ್ಮತ್ತಿ ವಲಯಾಧ್ಯಕ್ಷ ಕುಟ್ಟಂಡ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಜಿಲ್ಲಾ ಉಪಾಧ್ಯಕ್ಷ ಕಲೀಮುಲ್ಲಾ, ಗ್ರಾ.ಪಂ. ಸದಸ್ಯರಾದ ಮಂಜುಳಾ, ಶಾಹಿನ್, ಯಾಸ್ಮಿನ್, ಸಿದ್ದಾಪುರದ ಸುಕೂರ್, ಸೇವಾದಳದ ಸೈನುಲ್ಲಾ, ನಗರ ಕಾಂಗ್ರೆಸ್ ಪ್ರಮುಖರಾದ ಸಲಾಂ, ಶೀಬಾ ಮಣಿ, ಪಿ.ಕೆ. ಪ್ರವೀಣ್, ಬ್ಲಾಕ್ ಕಾರ್ಯದರ್ಶಿ ಹುಮಾಯನ್ ಪಾಶ, ಕಾಡ್ಯಮಾಡ ಚೇತನ್, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.