ಗೋಣಿಕೊಪ್ಪ ವರದಿ, ಡಿ. 8: ನೆಹರು ಯುವ ಕೇಂದ್ರ, ಮಾನಿಲ್ ಅಯ್ಯಪ್ಪ ಯುವಕ ಕೇಂದ್ರ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಕೊಡವ ಕೂಟ ಹಾಗೂ ಕಾವೇರಿ ಅಸೋಸಿಯೇಷನ್ ಆಶ್ರಯದಲ್ಲಿ ತಾಲೂಕು ಗ್ರಾಮೀಣ ಕ್ರೀಡಾಕೂಟ ಮತ್ತು ಪುತ್ತರಿ ಕೋಲಾಟ ಕಾರ್ಯಕ್ರಮ ಕಂಗಳತ್‍ನಾಡ್ ಕೂಟತ್‍ಮಾವ್ ಮಂದ್‍ನಲ್ಲಿ ನಡೆಯಿತು.

ಬೆಳಿಗ್ಗೆಯಿಂದ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಹುದಿಕೇರಿ ಮಹಾದೇವ ಯುವಕ ಸಂಘದ ಸದಸ್ಯರು ಪುತ್ತರಿ ಕೋಲಾಟ, ಬೊಳಕಾಟ, ಕತ್ತಿಯಾಟ ಮತ್ತು ಪರೆಯಕಳಿ ಪ್ರದರ್ಶಿಸಿದರು.

ಮಹಿಳೆಯರ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಪಿ.ಎಂ. ಶಿಲ್ಪ (ಪ್ರ), ಎ.ಕೆ. ಪ್ರೇಮ (ದ್ವಿ), ಎಸ್.ವಿ. ಸ್ವಪ್ನ (ತೃ), ಹಗ್ಗ ಜಗ್ಗಾಟದಲ್ಲಿ ಕಾವೇರಿ ತಂಡ (ಪ್ರ), ಗಂಗಾ ತಂಡ (ದ್ವಿ), ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಎ.ಎಂ. ದೇಚಮ್ಮ (ಪ್ರ), ಎ.ಕೆ. ಪ್ರೇಮ (ದ್ವಿ), ಚೈತ್ರ (ತೃ) ಸ್ಥಾನ ಪಡೆದುಕೊಂಡರು.

ಪುರುಷರ ವಿಭಾಗದ ಭಾರದ ಗುಂಡು ಎಸೆತದಲ್ಲಿ ಸಣ್ಣುವಂಡ ವಿನಯ್ ಅಯ್ಯಪ್ಪ (ಪ್ರ), ಆಪಟೀರ ಪ್ರದೀಪ್ (ದ್ವಿ), ಕೊಂಗಂಡ ಪಂಚು ದೇವಯ್ಯ (ತೃ), ಸೈಕಲ್ ಸ್ಲೋ ರೇಸ್‍ನಲ್ಲಿ ಸಣ್ಣುವಂಡ ವಿನು ವಿಶ್ವನಾಥ್ (ಪ್ರ), ಚೆಪ್ಪುಡೀರ ಪ್ರದೀಪ್ (ದ್ವಿ), ಸಿ.ಟಿ. ಬೆಳ್ಯಪ್ಪ (ತೃ), ಹಗ್ಗ ಜಗ್ಗಾಟದಲ್ಲಿ ರಾಯ್ ತಂಡ (ಪ್ರ), ಬೋಪಣ್ಣ ತಂಡ (ದ್ವಿ) ಸ್ಥಾನ ಪಡೆದುಕೊಂಡರು.

ಕಾವೇರಿ ಅಸೋಸಿಯೆಷನ್ ಅಧ್ಯಕ್ಷ ಕಾಳಪಂಡ ಸುಧೀರ್, ನೆಹರು ಯುವ ಕೇಂದ್ರ ಸಹಾಯಕ ಲೆಕ್ಕಾಧಿಕಾರಿ ಮಹೇಶ್, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ರಮೇಶ್, ಅಧ್ಯಕ್ಷ ವಿನು ವಿಶ್ವನಾಥ್, ಯುವಕ ಸಂಘ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಬಹುಮಾನ ವಿತರಿಸಿದರು.