ಶನಿವಾರಸಂತೆ, ಡಿ. 8: ಲಯನ್ಸ್ ಕ್ಲಬ್ ಹೆಚ್. ಸೆಂಟಿನಿಲ್ ಸಂಭ್ರಮ ಕ್ಲಬ್ ಮತ್ತು ಲಯನ್ಸ್ ಕ್ಲಬ್ ಬೆಂಗಳೂರು ಈಲೈಟ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರಸಂತೆ ಭಾರತೀ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬಿ.ಪಿ. ದಿವಾಕರ್, ವಿ. ರೇಣುಕುಮಾರ್, ಜಿಲ್ಲಾ ರಾಜ್ಯಪಾಲ ರವಿಕಾಂತ್ ಎಸ್.ಎಸ್. ಗೌಡ ಅಧ್ಯಕ್ಷರು ಎಲ್.ಸಿ.ಹೆಚ್., ಬಿ.ಸಿ ಧರ್ಮಪ್ಪ, ಉಪಾಧ್ಯಕ್ಷರು ಎಲ್.ಸಿ.ಹೆಚ್. ನಾರಾಯಣ ಸ್ವಾಮಿ ಉಪಾಧ್ಯಕ್ಷರು ಎಲ್.ಸಿ.ಹೆಚ್. ಎಂ.ಆರ್. ನಿರಂಜನ್, ಕಾರ್ಯದರ್ಶಿ ಎಲ್.ಪಿ.ಹೆಚ್. ಹಾಗೂ ಭಾರತೀ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಬಿ. ನಾಗಪ್ಪ, ಗೌರವ ಕಾರ್ಯದರ್ಶಿ ಕೆ.ಎಂ. ಜಗನ್‍ಪಾಲ್, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಎಂ.ಯು. ಮಹಮದ್ ಪಾಷ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಂ. ಉಮಾಶಂಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ರವಿಕುಮಾರ್, ಹಿರಿಯ ಸಹ ಶಿಕ್ಷಕ ಪಿ. ನರಸಿಂಹಮೂರ್ತಿ, ದೈಹಿಕ ನಿರ್ದೇಶಕರುಗಳಾದ ಅಶೋಕ್, ಪುನೀತ್, ಗಾಂಧಿ, ರಾಜಶೇಖರಪ್ಪ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.