ವೀರಾಜಪೇಟೆ, ಡಿ. 8: 25 ನೇ ವರ್ಷದ ನೆನಪಿಗಾಗಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ಮತ್ತು ಇತರ ಹಿಂದೂ ಸಂಘಟನೆಗಳಿಂದ ನಗರದ ಶ್ರೀ ಮಹಾ ಗಣಪತಿ ದೇವಾಲಯದಲ್ಲಿ ಸಂಕಲ್ಪ ಪೂಜೆ ಸಲ್ಲಿಸಿ ವಿಜಯೋತ್ಸವ ಅಚರಿಸಲಾಯಿತು.
ತಾಲೂಕು ವಿಶ್ವ ಹಿಂದೂ ಪರಿಷತ್‍ನ ಕಾರ್ಯಧ್ಯಕ್ಷ ಉದ್ದಪಂಡ ಜಗತ್ ಮಾತನಾಡಿ, ರಾಮ ಜನ್ಮಭೂಮಿ ಕರಸೇವೆಗೆ 25 ವರ್ಷಗಳು ಸಂದಿವೆ. ಅಯೋಧ್ಯಾಧಿಪತಿ ಶ್ರೀ ರಾಮಚಂದ್ರ ಸ್ವಾಮಿಯ ಭವ್ಯ ಮಂದಿರ ನಿರ್ಮಾಣ ಮಾಡುವಲ್ಲಿ ಸಂದೇಹವಿಲ್ಲ. ಆದರೆ ಈ ಸಂದರ್ಭ ಕರಸೇವೆಯ ನೆನೆಪನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು ಎಂದರು.
ಮಾತೃ ಮಂಡಳಿಯ ಮಾಜಿ ಜಿಲ್ಲಾಧ್ಯಕ್ಷೆ ಕಾಂತಿ ಸತೀಶ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಪರಿಕಲ್ಪನೆಯು ಪ್ರತಿಯೊಬ್ಬ ಹಿಂದೂಗಳ ಭಾವನೆಗಳ ಸಂಕೇತವಾಗಿದೆ. ಮಂದಿರ ನಿರ್ಮಾಣ ಮಾಡುವತ್ತ ಚಿತ್ತ ಹರಿಸಲು ಹಿಂದೂ ಬಾಂಧವರು ಮುಂದಾಗಬೇಕು ಎಂದರು. ಈ ಸಂದರ್ಭ ಭಜರಂಗದಳದ ತಾಲೂಕು ಸಂಚಾಲಕ ವಿವೇಕ್ ರೈ, ತಾಲೂಕು ಗೋ ರಕ್ಷಕ್ ಪ್ರಮುಖ್ ಕಿಶನ್, ವಿ.ಹೆಚ್.ಪಿ. ನಗರ ಕಾರ್ಯಧ್ಯಕ್ಷ ಪೊನ್ನಪ್ಪ ರೈ, ತಾಲೂಕು ಪಂಚಾಯಿತಿಯ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾಲೂಕು ಭಾ.ಜ.ಪ. ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮತ್ತಿತರರು ಹಾಜರಿದ್ದರು.