ಸುಂಟಿಕೊಪ್ಪ, ಡಿ. 7: ಕೊಡಗರಹಳ್ಳಿ ಸ್ಕೂಲ್‍ಬಾಣೆಯ ಜಮಾಅತ್ ಹಿದಾಯತುಲ್ ಇಸ್ಲಾಂ ಮಸೀದಿಯ ಈದ್‍ಮಿಲಾದ್ ಸಮಿತಿ ವತಿಯಿಂದ ಮಹಮ್ಮದ್ ಪೈಗಂಬರ್ 1493ನೇ ಜನ್ಮದಿನ ಆಚರಿಸಲಾಯಿತು. ಕೊಡಗರಹಳ್ಳಿ ಸ್ಕೂಲ್ ಬಾಣೆ ಸೇರಿದಂತೆ ಸುತ್ತಮುತ್ತಲಿನ ಮುಸ್ಲಿಂ ಬಾಂಧವರ ಮಕ್ಕಳು ದಫ್ ಬಾರಿಸುವ ಮೂಲಕ ಹಸಿರು ಧ್ವಜಗಳನ್ನು ಪ್ರದರ್ಶಿಸಿ ಮಹಮ್ಮದ್ ಪೈಗಂಬರ ಧ್ಯೇಯವಾಕ್ಯಗಳನ್ನು ಪಟಿಸುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಮಸೀದಿಯ ಖತೀಬ್ ಅಬೂಬಕರ್ ಮತ್ತು ಧರ್ಮಗುರುಗಳಾದ ಹಂಸ ಧಾರ್ಮಿಕ ಸಂದೇಶ ನೀಡಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬಂದವು.
ಈ ಸಂದರ್ಭ ಕೊಡಗರಹಳ್ಳಿ ಜಮಾಅತ್ ಅಧ್ಯಕ್ಷ ಎಂ.ಎಂ. ಉಸ್ಮಾನ್, ಕಾರ್ಯದರ್ಶಿ ಸಾದಿಕ್, ಈದ್‍ಮಿಲಾದ್ ಸಮಿತಿ ಅಧ್ಯಕ್ಷ ಜುನೈದ್, ಅಜೀಜ್ ಮತ್ತು ಪದಾಧಿಕಾರಿಗಳು ಸಮಾರಂಭದ ನೇತೃತ್ವ ವಹಿಸಿದ್ದರು.